ಮಂಡ್ಯ: ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದ ಬಾಲಕಿಯೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹನಕೆರೆ ಗ್ರಾಮದಲ್ಲಿಂದು (ಸೆ.1) ನಡೆದಿದೆ.
15 ವರ್ಷದ ಇಂಪನಾ ಮೃತ ಬಾಲಕಿಯಾಗಿದ್ದಾರೆ. ಈ ಬಾಲಕಿಯನ್ನು ಪ್ರೀತಿಸುವ ವಿಚಾರಕ್ಕೆ ಬಾಲಕರ ಗುಂಪಿನಲ್ಲಿ ಮಾತಿನ ಚಕಮಕಿ ನಡೆದಿದೆ. ಜೊತೆಗೆ ಬಾಲಕರು ಕೂಡಾ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕಿ ಇಂಪನಾ ನೇಣಿಗೆ ಶರಣಾಗಿದ್ದಾರೆ.
ಈ ಬಾಲಕಿಯನ್ನು ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕರ ನಡುವೆ ನಡೆದಿರುವ ಮಾತಿನ ಚಕಮಕಿಯ ಆಡಿಯೋ ಕೂಡಾ ವೈರಲ್ ಆಗಿದೆ. ರೊಚ್ಚಿಗೆದ್ದ ಬಾಲಕರು ಈ ಆಡಿಯೋವನ್ನು ಇಂಪನಾ ತಾಯಿಯ ವಾಟ್ಸಾಪ್ ನಂಬರ್‌ಗೂ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳಿಂದ ಕುಗ್ಗಿದ ಬಾಲಕಿ ನೇಣು ಬಿಗಿದುಕೊಂಡು ಮರಣ ಹೊಂದಿದ್ದಾರೆ.
ಈ ಘಟನೆ ಬಳಿಕ ಬಾಲಕರು ಪರಾರಿಯಾಗಿದ್ದಾರೆ. ಪರಾರಿಯಾದ ಬಾಲಕರ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಸಿಕೊಂಡ ಪೊಲೀಸರು ಕಾಣೆಯಾಗಿರುವ ಬಾಲಕರ ಪತ್ತೆಗೆ ಬಲೆ ಬೀಸಿದ್ದಾರೆ.