ಚಾಮರಾಜನಗರ ಜಿಲ್ಲೆಯ ಮರಿಯಾಲ ಗ್ರಾಮದ ಪ್ರಮುಖ ರಸ್ತೆಯು ಹಾಳಾಗಿದೆ. ಈ ರಸ್ತೆಯು ಕೆಲ್ಲಂಬಳ್ಳಿ, ಕಸ್ತೂರು ಮೂಲಕ ವಿವಿಧ ಗ್ರಾಮಗಳ ಮೂಲಕ ನಗರ ಪ್ರದೇಶಗಳಗೆ ಸಂಪರ್ಕ ಕಲ್ಪಿಸುವುದರಿಂದ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ದುರಸ್ತಿಪಡಿಸಲು ಶಾಸಕ, ಸಂಸದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





