Mysore
23
overcast clouds

Social Media

ಶುಕ್ರವಾರ, 27 ನವೆಂಬರ್ 2026
Light
Dark

ನ.30ಕ್ಕೆ ಲೋಕಸಭೆ, ಡಿ.2ಕ್ಕೆ ರಾಜ್ಯಸಭೆ ಕಲಾಪ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಯಾಗುತ್ತಾ?

ನವದೆಹಲಿ: ಸಂಸತ್ತಿನ ಉಭಯ ಸದನಗಳು ಮತ್ತೆ ಸಮಾವೇಶಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿದೆ. ನವೆಂಬರ್‌ 30ರ ಸೋಮವಾರ ಬೆಳಗ್ಗೆ ಲೋಕಸಭೆ ಹಾಗೂ ಡಿಸೆಂಬರ್‌ 2ರ ಬುಧವಾರ ಬೆಳಗ್ಗೆ ರಾಜ್ಯಸಭೆ ಕಲಾಪ ಆರಂಭವಾಗಲಿದೆ ಎಂದು ವರದಿಯಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಈ ಮಾಹಿತಿ ಹಂಚಿಕೊಂಡಿದ್ದು, ಕಲಾಪದ ಅಗತ್ಯಕ್ಕೆ ಅನುಗುಣವಾಗಿ ಡಿಸೆಂಬರ್‌ 3ರಂದು ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಮಸೂದೆಗಳನ್ನು ಸರ್ಕಾರ ಮಂಡಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಆದರೆ ಯಾವ ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಅಧಿಕೃತ ಕಾರ್ಯಸೂಚಿ ಇನ್ನೂ ಪ್ರಕಟವಾಗಿಲ್ಲ. ಹೀಗಾಗಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಅಥವಾ ಅಂಗೀಕಾರದ ಬಗ್ಗೆ ಸದ್ಯ ಖಚಿತತೆ ಇಲ್ಲ.

Tags:
error: Content is protected !!