Mysore
26
scattered clouds

Social Media

ಗುರುವಾರ, 28 ಮೇ 2026
Light
Dark

ಓದುಗರ ಪತ್ರ: ಬಿಪಿಎಲ್ ಆದಾಯ ಮಿತಿ ಹೆಚ್ಚಿಸಿ

ಓದುಗರ ಪತ್ರ

ರಾಜ್ಯಾದ್ಯಂತ ಹೊಸ ಬಿಪಿಎಲ್ ಕಾರ್ಡ್‌ಗಾಗಿ ಸಲ್ಲಿಕೆಯಾಗಿರುವ ಮೂರು ಲಕ್ಷ ಅರ್ಜಿಗಳು ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಬೇಸರದ ಸಂಗತಿ. ತಾಂತ್ರಿಕ ಮಾನದಂಡಗಳ ನೆಪದಲ್ಲಿ ಅರ್ಹ ಬಡ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿವೆ.

ಈಗಾಗಲೇ ಅನರ್ಹರ ಐದು ಲಕ್ಷ ಕಾರ್ಡ್ಗಳನ್ನು ರದ್ದುಗೊಳಿಸಿರುವುದು ಶ್ಲಾಘನೀಯ. ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ರೂ. ಒಂದು ಲಕ್ಷದಿಂದ ಮೂರು ಲಕ್ಷಕ್ಕೆ ಹೆಚ್ಚಿಸಲು ಆಡಳಿತ ಸುಧಾರಣಾ ಆಯೋಗ ಮಾಡಿರುವ ಶಿಫಾರಸನ್ನು ಸರ್ಕಾರ ಅನುಷ್ಠಾನ ಮಾಡಬೇಕು. ಹಾಗೂ ಬಾಕಿ ಇರುವ ಬಿಪಿಎಲ್ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಬಡಜನರಿಗೆ ನ್ಯಾಯ ಒದಗಿಸಬೇಕು.

 -ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

 

Tags:
error: Content is protected !!