ಬೆಂಗಳೂರು: ಇಂದು ಬೆಳಿಗ್ಗೆ ಉಪಹಾರಕ್ಕೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ತಬ್ಬಿಕೊಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಮನೆಗೆ ಬಂದ ಡಿಕೆಶಿ ಜೊತೆ ಮೊದಲು ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದರು. ಆ ಬಳಿಕ ಸಚಿವರ ಜೊತೆ ಸಿಎಂ ಮಾತನಾಡಿದರು. ಸಭೆಯಲ್ಲಿ ಸಿದ್ದರಾಮಯ್ಯನವರ ಅಕ್ಕಪಕ್ಕ ಡಿಸಿಎಂ ಡಿಕೆಶಿ ಮತ್ತು ಪರಮೇಶ್ವರ್ ಕುಳಿತರು.
ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಸಚಿವರು ಭಾಗಿಯಾಗಿದ್ದು, ಸಭೆ ಬಳಿಕ ಯಾವೆಲ್ಲಾ ಬೆಳವಣಿಗೆ ಆಗಲಿದೆ ಎಂದು ಕಾದುನೋಡಬೇಕಿದೆ.




