Mysore
27
scattered clouds

Social Media

ಮಂಗಳವಾರ, 26 ಮೇ 2026
Light
Dark

ಮಂಡ್ಯ: ಹೃದಯಾಘಾತದಿಂದ ರೈತ ಸಾವು

ಮಂಡ್ಯ: ಜಮೀನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತದಿಂದ ಅನ್ನದಾತ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಣ್ಣ ಗೌಡ(55) ಎಂಬುವವರೇ ಮೃತ ರೈತನಾಗಿದ್ದಾರೆ. ತಮ್ಮ ಜಮೀನಿನಲ್ಲಿ ಇಪ್ಪನೇರಳೆ ಕಟ್ಟಿಗೆ ಉಳುಮೆ ಮಾಡುತ್ತಿದ್ದ ರೈತ ಶಿವಣ್ಣಗೌಡಗೆ ಹಠಾತ್‌ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ರೇಷ್ಮೆ ಬೆಳೆ ಬೆಳೆದುಕೊಂಡು ಜೀವನ ನಡೆಸುತ್ತಿದ್ದ ರೈತ ಶಿವಣ್ಣ ಗೌಡ ಅವರ ಅಗಲಿಕೆಯಿಂದ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಕಂಗಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಕೆರಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:
error: Content is protected !!