Mysore
27
scattered clouds

Social Media

ಬುಧವಾರ, 25 ನವೆಂಬರ್ 2026
Light
Dark

ಓದುಗರ ಪತ್ರ: ಬಸ್‌ಗಳಲ್ಲಿ ಈ ಫಲಕ ಇನ್ನೂ ಇರಬೇಕೆ?

dgp murder case

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮೊದಲ ಎರಡು ಸೀಟುಗಳಲ್ಲಿ ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರು ಎಂದು -ಲಕಗಳನ್ನು ಹಾಕಿರುತ್ತಾರೆ. ಇದು ಸಂಪ್ರದಾಯದ ಆಚರಣೆಯಂತೆ ಕಾಣುತ್ತಿದೆ.

ಕಾರಣ ರಾಜ್ಯದ ಶಾಸಕರಾಗಲಿ, ಸಂಸದರಾಗಲಿ ಈಗಂತೂ ಬಸ್ಸನ್ನು ಹತ್ತುತ್ತಾರೆ ಎಂದರೆ ಅದೊಂದು ವಿಸ್ಮಯವೇ ಸರಿ ಎಂಬಂತಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಬಹುತೇಕ ಸದಸ್ಯರೇ ಕಾರುಗಳನ್ನು ಹೊಂದಿರಬೇಕಾದರೆ ಇನ್ನು ಶಾಸಕರು ಮತ್ತು ಸಂಸದರು ಬಸ್ಸು ಹತ್ತುತ್ತಾರೆಯೇ?

ಅದು ಒಂದು ಕಾಲ ಇತ್ತು. ಜನಪ್ರತಿನಿಧಿಗಳು ರಾಜ್ಯಸಾರಿಗೆ ನಿಗಮದ ಬಸ್ಸುಗಳಲ್ಲೇ ಪ್ರಯಾಣಿಸುತ್ತಿದ್ದುದರಿಂದ ಆದ್ಯತೆ ಮೇರೆಗೆ ಅವರಿಗೆ ಆಸನ ಮೀಸಲಿರಿಸಲಾಗುತ್ತಿತ್ತು. ಅದು ಜನರಿಗೆ ಗೊತ್ತಾಗಲಿ ಅಂತ ಸೀಟಿನ ಬಳಿಯ ಕಿಟಕಿಯ ಮೇಲ್ಭಾಗದಲ್ಲಿ ಯಾರಿಗೆ ಮೀಸಲೆಂದು ಬರೆಯಲಾಗುತ್ತಿತ್ತು.

ಆದರೆ ಕಾಲ ಬದಲಾಗಿದ್ದರೂ ಸಾರಿಗೆ ನಿಗಮದವರು ಮುನ್ನೆಚ್ಚರಿಕೆಯಕ್ರಮವಾಗಿ ಇನ್ನೂ ಆ‘ ಮೀಸಲಾತಿ’ಯನ್ನು ಮುಂದುವರಿಸಿದ್ದಾರೆ. ಇದು ನಗೆಪಾಟಲಿಗೂ ಕಾರಣವಾಗುತ್ತದೆ. ಆ ಮೀಸಲಾತಿ ಇನ್ನೂ ಮುಂದುವರಿಯಬೇಕೆ ಎಂಬ ಬಗ್ಗೆ ಸಾರಿಗೆ ನಿಗಮದವರೇ ನಿರ್ಧರಿಸಬೇಕು. ಅಂದರೆ ಬಸ್ಸಿನಲ್ಲಿರುವ ಆಸನದ ಮೀಸಲಾತಿ ಫಲಕವನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾದರೆ ಒಳ್ಳೆಯದು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!