Mysore
73
broken clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಮಂಡ್ಯ: ತಲೆ ಮೇಲೆ ವಿದ್ಯುತ್‌ ಕಂಬ ಮುರಿದು ಬಿದ್ದು ಲೈನ್‌ ಮ್ಯಾನ್‌ ಸಾವು

ಮಂಡ್ಯ: ತಲೆಮೇಲೆ ವಿದ್ಯುತ್‌ ಕಂಬ ಮುರಿದು ಬಿದ್ದು ಲೈನ್‌ ಮ್ಯಾನ್‌ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಸಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಕುಲುಮೆದೊಡ್ಡಿ ಗ್ರಾಮದ ಕುಮಾರ್‌ ಎಂದು ಗುರುತಿಸಲಾಗಿದೆ. ವಿದ್ಯುತ್‌ ಲೈನ್‌ ಕೆಲಸ ಮಾಡುವ ವೇಳೆ ಕಂಬ ಅಳವಡಿಸುವಾಗ ವಿದ್ಯುತ್‌ ಕಂಬ ಮುರಿದು ಲೈನ್‌ ಮ್ಯಾನ್‌ ತಲೆ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡ ಕುಮಾರ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಮನೆಗೆ ಆ ಪೇಪರ್‌ ತಲುಪಿಲ್ಲವೇ.. ಹಾಗಿದ್ದಲ್ಲಿ E-Paper ಓದಿ

Tags:
error: Content is protected !!