ಹಾಸನ: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ದುಷ್ಕರ್ಮಿಗಳು ಶವದ ಮೇಲೆ ಸೊಪ್ಪು ಮುಚ್ಚಿ ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ-ಮೈಸೂರು ಹೆದ್ದಾರಿಯ ಎಸ್.ಅಂಕನಹಳ್ಳಿ ಅರಣ್ಯ ಪ್ರದೇಶದ ಬಳಿ ಈ ಘಟನೆ ನಡೆದಿದ್ದು, ಹೊಳೆ ನರಸೀಪುರದ ಅಂಬೇಡ್ಕರ್ ನಗರ ನಿವಾಸಿ ಮಣಿ ಎಂಬುವವರೇ ಕೊಲೆಯಾದ ವ್ಯಕ್ತಿಯಾಗಿದ್ದಾರೆ.
ಇದನ್ನು ಓದಿ : ದಿನಗೂಲಿ ಕಾರ್ಮಿಕರ ಆತ್ಮಹತ್ಯೆಗಳು ಹೆಚ್ಚುತ್ತಿವೆಯೇ?
ಕೊಲೆ ಬಳಿಕ ಮೃತದೇಹ ಹಾಗೂ ಅದರ ಪಕ್ಕದಲ್ಲಿರುವ ಬೈಕ್ ಮೇಲೆ ಸೊಪ್ಪು ಮುಚ್ಚಿ ಆರೋಪಿಗಳು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಹಳ್ಳಿ ಮೈಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.





