Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಚಾಮರಾಜನಗರ | ನಾಟಿ ಕೋಳಿ ಸಾರು, ಮುದ್ದೆ ತಿನ್ನುವ ಸ್ಪರ್ಧೆ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ನಾಟಿಕೋಳಿ ಸಾರು ಹಾಗೂ ಮುದ್ದೆ ತಿನ್ನುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ಗ್ರಾಮದ ರವಿಕುಮಾರ್ ಮತ್ತು ಬಸವರಾಜು ಎಂಬುವವರು ಈ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಸ್ಪರ್ಧೆಯಲ್ಲಿ 18 ಜನ ಪುರುಷರು, 5 ಮಂದಿ ಮಹಿಳೆಯರು ಭಾಗಿಯಾಗಿದ್ದರು.

ಪುರುಷರ ವಿಭಾಗದಲ್ಲಿ ಕುನ್ನ ನಾಯಕ ಎಂಬುವವರು 11 ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದಿದ್ದು, ನಾಗಮಲ್ಲ ನಾಯಕ ಎಂಬುವವರು 9 ಮುದ್ದೆ ತಿಂದು ಎರಡನೇ ಸ್ಥಾನ ಪಡೆದಿದ್ದಾರೆ.

ಇನ್ನು ಮಹಿಳೆಯರ ವಿಭಾಗದಲ್ಲಿ ಮಾದೇವಮ್ಮ ಎಂಬುವವರು 5 ಮುದ್ದೆ ತಿಂದು ಮೊದಲ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದವರಿಗೆ 5000 ಸಾವಿರ ಬಹುಮಾನ ನೀಡಲಾಗಿದ್ದು, ದ್ವಿತೀಯ ಸ್ಥಾನ ಪಡೆದವರಿಗೆ 2500 ರೂಪಾಯಿ ಬಹುಮಾನ ನೀಡಲಾಯಿತು.

ಇನ್ನು, ಈ ಸ್ಪರ್ಧೆಗೆ 200 ಮುದ್ದೆ ಹಾಗೂ 30 ಕೆಜಿ ನಾಟಿ ಕೋಳಿ ಸಾರನ್ನು ತಯಾರು ಮಾಡಲಾಗಿತ್ತು.

Tags:
error: Content is protected !!