ನಂಜನಗೂಡು : ನಗರದ ಕಬಿನಿ ಸಂಗಮ ಹೋಟೆಲ್ ನಲ್ಲಿ ನಗರಸಭಾ ಸದಸ್ಯ ದೊರೆಸ್ವಾಮಿ ಮತ್ತು 50 ಕ್ಕೂ ಹೆಚ್ಚು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ನಗರಸಭಾ ಸದಸ್ಯ ದೊರೆಸ್ವಾಮಿ ಮತ್ತು ಬೆಂಬಲಿಗದರಿಗೆ ಕಾಂಗ್ರೆಸ್ ಶಲ್ಯ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಮೂರು ತಿಂಗಳ ಅವಧಿ ಇದ್ದರು ನಗರಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ದೊರೆಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಇನ್ನು ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ದೊರೆಸ್ವಾಮಿ ಅವರು, ನನ್ನ ರಾಜಕೀಯ ಜೀವನ ಕಾಂಗ್ರೆಸ್ ನಿಂದ ಪ್ರಾರಂಭವಾಗಿತ್ತು. ನನಗೆ ಟಿಕೆಟ್ ನೀಡಿದ್ದು ಬೆಂಕಿ ಮಹದೇವಪ್ಪ ರವರು, ಧ್ರುವನಾರಾಯಣ್ ರವರ ಅಕಾಲಿಕ ನಿಧನ ನೋವು ತಂದಿದೆ. ದರ್ಶನ್ ಧ್ರುವನಾರಾಯಣ್ ಅವರನ್ನು ನಾವೆಲ್ಲರೂ ಬೆಂಬಲಿಸಬೇಕು. ದರ್ಶನ್ ಅವರು ತಂದೆ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದಾರೆ,ಆದರೆ ಕ್ಷೇತ್ರದ ಜನತೆ ನಿಮ್ಮೊಂದಿಗೆ ಇದ್ದಾರೆ. ದರ್ಶನ್ ರವರು ಮುಂದಿನ ಭವಿಷ್ಯದ ನಾಯಕರಾಗುತ್ತಾರೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಧ್ರುವನಾರಾಯಣ್ ಸ್ನೇಹಿತ ಶ್ರೀಕಂಠು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ದೊರೆಸ್ವಾಮಿ ನಾಯ್ಕ, ಸಿಎಂ ಶಂಕರ್, ಜಿಪಂ ಮಾಜಿ ಸದಸ್ಯ ಲತಾಸಿದ್ದಶೆಟ್ಟಿ, ಮಾಜಿ ತಾಪಂ ನಾಗೇಶ್ ರಾಜ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.