ಅಹ್ಮದಾಬಾದ್ : ಟ್ರಾವಿಸ್ ಹೆಡ್ ಅವರ ಆಕರ್ಷಕ ಶತಕ ನೆರವಿನಿಂದ ಭಾರತ ತಂಡವನ್ನು ಬಗ್ಗು ಬಡಿದ ಆಸ್ಟ್ರೇಲಿಯಾ ವರ್ಲ್ಡ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
ಆ ಮೂಲಕ 6ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾರತ ನೀಡಿದ ನೀಡಿದ 240 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 43 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ಬಾರಿಸಿ 6ವಿಕೆಟ್ ಗಳ ಗೆಲುವು ಪಡೆಯಿತು.
ಟ್ರಾವಿಸ ಹೆಡ್ ಅಜೇಯ ಶತಕ ಗಳಿಸಿದರೆ, ಮರ್ನುಸ್ ಅರ್ಧ ಶತಕ ಸಿಡಿಸಿ ಆಸೀಸ್ ಗೆಲುವಿಗೆ ಕಾರಣರಾದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 4 ರನ್ ಗಳಿಸಿ ಗಿಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು, ನಂತರ ಬಂದ ಶ್ರೇಯಸ್ ಅಯ್ಯರ್ (4) ಬಂದ ದಾರಿಯಲ್ಲೇ ಹೊರ ನಡೆದರು. ನಾಯಕ ರೋಹಿತ್ ಶರ್ಮಾ 3 ಸಿಕ್ಸರ್ ಹಾಗೂ ಫೋರ್ ಸೇರಿ 47ರನ್ ಗಳಿಸಿ ತಂಡ ಬಿಗ್ ಸ್ಕೋರ್ ಮಾಡುವ ಮುನ್ಸೂಚನೆ ನೀಡಿ ನಿರ್ಗಮಿಸಿದರು.
ಬಳಿಕ ಒಂದಾದ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ರಾಹುಲ್ ಭಾರತ ತಂಡ 240ರನ್ ಗಡಿ ದಾಟಿಸಲು ಸಹಾಯ ಮಾಡಿದರು.
ಅರ್ಧ ಶತಕ ಜೊತೆಯಾಟ ನೀಡಿದ ಕೊಹ್ಲಿ ಮತ್ತು ರಾಹುಲ್ ತಂಡಕ್ಕೆ ಅರ್ಹ ಹೋರಾಟದ ಮೊತ್ತವನ್ನು ದಾಖಲಿಸಿತು. 63 ಎಸೆತಗಳಲ್ಲಿ 4 ಬೌಂಡರಿ ಸಹಿತ ಕೊಹ್ಲಿ 54ರನ್ ಗಳಿಸಿದರೆ, ಕನ್ನಡಿಗ ಕೆ ಎಲ್ ರಾಹುಲ್ 107 ಎಸೆತಗಳಲ್ಲಿ 1 ಬೌಂಡರಿ ಸಹಿತ 66 ರನ್ ಗಳಿಸಿದರು. ಈ ಇಬ್ಬರು ಆಟಗಾರರ ಪತನದ ನಂತರ ಬೇರೆ ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ.
ಸೂರ್ಯ ಕುಮಾರ್ ಯಾದವ್ 18, ಕುಲದೀಪ್ ಯಾದವ್ 10 ಮತ್ತು ಸಿರಾಜ್ 9 ರನ್ ಗಳಿಸಿದರು.
ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಭಾರತವನ್ನು ಕಟ್ಟಿ ಹಾಕುವಲ್ಲಿ ಸಫಲರಾದರು. ವೇಗಿ ಸ್ಟಾರ್ಕ್ 10 ಓವರ್ ಬೌಲ್ ಮಾಡಿ 55 ರನ್ ನೀಡಿ 3 ವಿಕೆಟ್ ಪಡೆದರು. ನಾಯಕ ಕಮಿನ್ಸ್ 2 ಹಾಗೂ ಹೇಜಲ್ವುಡ್ 2 ವಿಕೆಟ್ ಪಡೆದರು.
ಭಾರತ ನೀಡಿದ 240 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿದರು. ವಾರ್ನರ್ 7 ರನ್ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ ಅಬ್ಬರದ ಮುನ್ಸೂಚನೆ ನೀಡಿದರು. 15 ರನ್ ನೀಡಿ ಹೊರ ನಡೆದರು.
ನಂತರ ಜೊತೆಯಾದ ಹೆಡ್ ಹಾಗೂ ಮಾರ್ನುಸ್ ಮುರಿಯದ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಹೆಡ್ 119 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 137 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮಾರ್ನುಸ್ ಲ್ಯಮಿಚೆನ್ನೆ 110 ಎಸೆತಗಳಲ್ಲಿ 4 ಬೌಂಡರಿ ಸಹಿತ 58 ರನ್ ಬಾರಿಸಿದರು.
ಕೊನೆಯಲ್ಲಿ ಬಂದ ಮ್ಯಾಕ್ಸ್ವೆಲ್ ವಿನ್ನಿಂಗ್ ರನ್ ಬಾರಿಸಿದರು.
ಪಂದ್ಯ ಶ್ರೇಷ್ಠ,: ಟ್ರಾವಿಸ್ ಹೆಡ್