ರೈಲು ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಭಾರತೀಯ ರೈಲ್ವೆ ‘ರೈಲ್ ಒನ್’ (Rail One) ಎನ್ನುವ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಸೆಂಟರ್ ಫಾರ್ ರೈಲ್ವೆ ಇನಾರ್ಮೇಶನ್ ಸಿಸ್ಟಂನ ೪೦ನೇ ಸಂಸ್ಥಾಪನಾ ದಿನವಾದ ಜುಲೈ ೧ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ ಒನ್ ಆಪ್ ಬಿಡುಗಡೆ ಮಾಡಿದ್ದಾರೆ. ಈ ರೈಲ್ ಒನ್ ಆಪ್ ಆಂಡ್ರಾಯ್ಡ್ ಮತ್ತು ಆಪಲ್ ಪ್ಲಾಟ್ಫಾರ್ಮ್ ಎರಡರಲ್ಲೂ ಲಭ್ಯವಾಗಲಿದೆ. ರೈಲ್ವೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಲು ಹಾಗೂ ಪ್ರಯಾ ಣಿಕರಿಗೆ ಅಗತ್ಯ ವಾಗಿರುವ ಯಾವುದೇ ಸೇವೆಯನ್ನು ಪಡೆಯಲು ಈ ಹೊಸ ಆಪ್ ಉಪಯುಕ್ತ ವಾಗಲಿದೆ. ಐಆರ್ ಸಿಟಿಸಿ, ರೈಲ್ ಕನೆಕ್ಟ್, ಯುಟಿ ಸನ್ ಮೊಬೈಲ್, ರೈಲ್ ಮದದ್ ಇತ್ಯಾದಿ ವಿವಿಧ ಪೋರ್ಟಲ್‌ಗಳು ನೀಡುವ ಸೇವೆಗಳನ್ನು ರೈಲ್ ಒನ್ ಆಪ್ ಒಂದರಲ್ಲೇ ಪಡೆಯಬಹುದು.
ರೈಲ್ವೆ ಟಿಕೆಟ್ ಮುಂಗಡ ಕಾದಿರಿಸಲು ರೈಲ್ ಕನೆಕ್ಟ್, ರೈಲು ಪ್ರಯಾಣದ ಸಮಯದಲ್ಲಿ ಊಟ-ತಿಂಡಿ ಆರ್ಡರ್ ಮಾಡಲು ಐಆರ್‌ಸಿಟಿಸಿ, ಫೀಡ್‌ಬ್ಯಾಕ್ ನೀಡಲು ರೈಲ್ ಮದದ್, ರೈಲು ಟಿಕೆಟ್ ಖರೀದಿಸಲು ಯುಟಿ ಸನ್ ಮೊಬೈಲ್, ರೈಲುಗಳ ಪಿಎನ್‌ಆರ್ ಸ್ಟೇಟಸ್ ಗಮನಿಸಲು ನ್ಯಾಷನಲ್ ಟ್ರೈನ್ ಎನ್‌ಕ್ವೈಯರಿಯನ್ನು ಬಳಸಬಹುದು. ಇದೀಗ ಈ ಎಲ್ಲ ಸೇವೆಗಳೂ ರೈಲ್ ಒನ್ ಆಪ್‌ನಲ್ಲೇ ದೊರೆಯಲಿದೆ.