ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ೫೪೧ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ೨೧ ರಿಂದ ೩೦ ವರ್ಷ ವಯೋಮಿತಿಯ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ ೧೪ ಕೊನೆಯ ದಿನಾಂಕವಾಗಿದೆ.
ಆಸಕ್ತ ಅಭ್ಯರ್ಥಿಗಳು sbi.co.in ಗೆ ಭೇಟಿ ನೀಡುವ ಮೂಲಕ ಅಥವಾ ನೇರವಾಗಿ ನೋಂದಣಿ ಪೋರ್ಟಲ್ ibpsonline.ibps.in/sbipomay25 ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಡಿ ಒಟ್ಟು ೫೪೧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇವುಗಳಲ್ಲಿ ೫೦೦ ಹುದ್ದೆಗಳು ನಿಯಮಿತ ವರ್ಗದ ಹುದ್ದೆಗಳಾಗಿವೆ. ೪೧ ಹುದ್ದೆಗಳು ಬ್ಯಾಕ್‌ಲಾಗ್ ಹುದ್ದೆಗಳಾಗಿವೆ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅಭ್ಯರ್ಥಿಯ ವಯೋಮಿತಿ ೨೧ ರಿಂದ ೩೦ ವರ್ಷಗಳ ನಡುವೆ ಇರಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ವರ್ಗಗಳಿಗೆ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗುತ್ತದೆ. ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್ ವರ್ಗದವರಿಗೆ ೭೫೦ ರೂ. ಶುಲ್ಕ, ಎಸ್‌ಸಿ, ಎಸ್‌ಟಿ, ಪಿಡ ಬ್ಲ್ಯುಡಿ ವರ್ಗದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆನ್‌ಲೈನ್ ಮೋಡ್‌ನಲ್ಲಿ ಶುಲ್ಕ ಪಾವತಿಸಬೇಕು.