Mysore
22
broken clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಚಾಮುಂಡಿಬೆಟ್ಟಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ ವಿಚಾರ: ಅರ್ಚಕ ಸುನೀಲ್ ದೀಕ್ಷಿತ್ ಪ್ರತಿಕ್ರಿಯೆ

ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಭೇಟಿ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಚಾಮುಂಡಿಬೆಟ್ಟದ ಅರ್ಚಕ ಸುನೀಲ್‌ ದೀಕ್ಷಿತ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಣವೀರ್ ಸಿಂಗ್ ಸಾಮಾನ್ಯರಂತೆಯೇ ದೇವಿಯ ದರ್ಶನಕ್ಕೆ ಕ್ಯೂನಲ್ಲಿ ಬಂದಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದರು. ನಮಗೆ ಪತ್ತೆ ಮಾಡಲು ಆಗಲಿಲ್ಲ. ಮೂವರ ಜೊತೆಗೆ ಬೆಳಗ್ಗೆ 7:45ರ ಸಮಯದಲ್ಲಿ ಬಂದಿದ್ದರು. ಪೂಜೆ ಸಾಮಗ್ರಿಗಳನ್ನು ಅವರೇ ತಂದು ಪೂಜೆ ಸಲ್ಲಿಸಿದರು. ದೇವರಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿದರು. ಸುಮಾರು 15 ನಿಮಿಷಗಳ ಕಾಲ ಕುಳಿತಿದ್ದರು. ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಹೋದರು. ಅವರು ಬರುವ ವಿಷಯವು ನಮಗೆ ತಿಳಿದಿರಲಿಲ್ಲ. ಏನು ಪ್ರಾರ್ಥನೆ ಮಾಡಿದ್ದರೆಂದು ಗೊತ್ತಿಲ್ಲ. ದೈವವನ್ನು ಅವಹೇಳನ ಮಾಡಿದ್ದರೆ ಅದು ಮನುಷ್ಯನಿಗೆ ಹಾಗೂ ದೇವರಿಗೆ ಬಿಟ್ಟಿದ್ದು. ಚಾಮುಂಡೇಶ್ವರಿ ಕ್ಷಮಿಸಲುಬಹುದು ಎಂದು ಹೇಳಿದರು.

Tags:
error: Content is protected !!