Mysore
24
overcast clouds

Social Media

ಶನಿವಾರ, 13 ಜೂನ್ 2026
Light
Dark

ಓದುಗರ ಪತ್ರ: ಮಲತಾಯಿ ಧೋರಣೆ ಏಕೆ?

ಓದುಗರ ಪತ್ರ

ರಾಜ್ಯದಲ್ಲಿ ಕ್ರಿಕೆಟ್ ಗೀಳಿನ ಅಬ್ಬರದಲ್ಲಿ ಫುಟ್ಬಾಲ್ ಕ್ರೀಡೆ ಧೂಳೀಪಟ ವಾಗುತ್ತಿರುವುದು ಅತ್ಯಂತ ಆಘಾತಕಾರಿ.

ಶೇ. ೯೦ ಕ್ಕೂ ಹೆಚ್ಚು ಫುಟ್ಬಾಲ್ ಕ್ರೀಡಾಂಗಣಗಳು ಸರಿಯಾದ ಹುಲ್ಲುಹಾಸು ಇಲ್ಲದೆ ಕೇವಲ ಮಣ್ಣಿನ ದಿಬ್ಬಗಳಾಗಿವೆ. ಕೇವಲ ಬೆರಳೆಣಿಕೆಯಷ್ಟು ಅಂತರರಾಷ್ಟ್ರೀಯ ಗುಣಮಟ್ಟದ ಮೈದಾನಗಳಿದ್ದು, ಅವುಗಳ ನಿರ್ವಹಣೆಗೆಸರ್ಕಾರ ಬಿಡುಗಡೆ ಮಾಡುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಸರ್ಕಾರ ಮತ್ತು ಕ್ರೀಡಾ ಇಲಾಖೆಯ ಅಸಡ್ಡೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸ್ಥಳೀಯ ಪ್ರತಿಭೆಗಳು ಕಮರಿ ಹೋಗುತ್ತಿವೆ. ಯುವ ಆಟಗಾರರಿಗೆ ಪ್ರೋತ್ಸಾಹ ಧನವಿಲ್ಲ, ಸರಿಯಾದ ತರಬೇತುದಾರರಿಲ್ಲ. ಬಜೆಟ್‌ನಲ್ಲಿ ಸಿಗುವ ಅಲ್ಪಸ್ವಲ್ಪ ಅನುದಾನವೂ ಇತರೆಡೆಗೆ ವರ್ಗಾವಣೆಯಾಗುತ್ತಿರುವುದು ಕ್ರೀಡಾ ವ್ಯವಸ್ಥೆಯ ಸ್ಥಿತಿಯನ್ನು ತೋರಿಸುತ್ತದೆ.

ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸುಸಜ್ಜಿತ ಸಿಂಥೆಟಿಕ್ ಟರ್ಫ್ ಮೈದಾನ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಶಾಲೆ-ಕಾಲೇಜು ಹಂತದ ಕಡ್ಡಾಯವಾಗಿ ಲೀಗ್ ಪಂದ್ಯಾವಳಿಗಳನ್ನು ಆಯೋಜಿಸಿ, ಕ್ರೀಡಾ ನಿಧಿಯನ್ನು ಮೀಸಲಿಡಬೇಕು. ಇಲ್ಲದಿದ್ದರೆ ಕರ್ನಾಟಕದ ಫುಟ್ಬಾಲ್ ಭವಿಷ್ಯ ಮಂಕಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!