Mysore
23
overcast clouds

Social Media

ಬುಧವಾರ, 29 ಜುಲೈ 2026
Light
Dark

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

dgp murder case

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ ಪ್ರಶಸ್ತಿ ನೀಡಿರುವುದು ಪ್ರಶಂಸನೀಯ. ಈ ಬಾರಿ ಇಬ್ಬರು ಚುಟುಕು ಸಾಹಿತಿಗಳಿಗೆ ಈ ಗೌರವ ದೊರೆತಿದೆ. ಈ ನಿಟ್ಟಿನಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಮೈಸೂರಿನ ಡಾ ಎಂ.ಜಿ.ಆರ್.ಅರಸ್ ರವರು ಚುಟುಕು ಸಾಹಿತ್ಯ ಪರಿಷತ್ ಸ್ಥಾಪಿಸಿ, ಕಳೆದ ಎರಡೂವರೆ ದಶಕಗಳಿಂದಲೂ ಪ್ರತಿ ವರ್ಷವೂ ಚುಟುಕು ಸಾಹಿತ್ಯ ಪರಿಷತ್ ಮೂಲಕ ಚುಟುಕು ಕವಿಗೋಷ್ಠಿಗಳನ್ನು ಅಯೋಜಿಸಿ, ಬೆಳಕಿಗೆ ಬಾರದ ಹಲವಾರು ಸಾಹಿತಿಗಳನ್ನು ಪರಿಚಯಿಸಿದ್ದಾರೆ.

ಹಾಗೆಯೇ ಕಳೆದ ಹಲವಾರು ವರ್ಷಗಳಿಂದಲೂ ಚುಟುಕು ಸಾಹಿತ್ಯ ಪರಿಷತ್ ಧ್ಯೇಯ ವಾಕ್ಯವಾದ ಚುಟುಕು ಸಾಹಿತ್ಯ, ಬದುಕಿಗೆ ಲಾಲಿತ್ಯ ಎಂದು ಪರಿಚಯಿಸಿ, ಬಹಳಷ್ಟು ಚುಟುಕು ಕವನಗಳು, ಚುಟುಕು ಕವನ ಸಂಕಲನಗಳನ್ನು ತಮ್ಮ ಪರಿಷತ್ ಮೂಲಕ ಪ್ರಕಟಿಸಿ, ಪ್ರತಿ ವರ್ಷವೂ ಚುಟುಕು ಸಾಹಿತ್ಯ ಸಮಾವೇಶ ಏರ್ಪಡಿಸಿ, ಚುಟುಕು ಶ್ರೀ, ಇತ್ಯಾದಿ ಬಿರುದುಗಳನ್ನು ನೀಡುತ್ತಾ ಬಂದಿರುವುದು ಮೆಚ್ಚುವಂತಹದ್ದು.

ಪ್ರಸ್ತುತ ಚುಟುಕು ಸಾಹಿತ್ಯದ ಪ್ರಕಾರಕ್ಕೂ ಮನ್ನಣೆ ನೀಡಿ ಕನ್ನಡ ಪುಸ್ತಕ ಪ್ರಾಧಿಕಾರ, ಚುಟುಕು ಸಾಹಿತಿಗಳನ್ನು ಗುರುತಿಸಿ ಗೌರವಿಸಿರುವುದು, ಡಾ. ಅರಸ್‌ರವರ ಶ್ರಮಕ್ಕೆ ಸಂದ ಗೌರವ ಎಂದೇ ಹೇಳಬೇಕು.

-ವಿಜಯ್ ಹೆಮ್ಮಿಗೆ, ಮೈಸೂರು

Tags:
error: Content is protected !!