Mysore
27
broken clouds

Social Media

ಶುಕ್ರವಾರ, 02 ಅಕ್ಟೋಬರ್ 2026
Light
Dark

ಓದುಗರ ಪತ್ರ: ಹಾರ್ಡಿಂಜ್ ವೃತ್ತದಲ್ಲಿರುವ ನಿಲ್ದಾಣದಲ್ಲೇ ಬಸ್ ನಿಲುಗಡೆಯಾಗಲಿ

ಓದುಗರ ಪತ್ರ

ಮೈಸೂರಿನ ಹಾರ್ಡಿಂಜ್ ವೃತ್ತದ ಮೂಲಕ ಮೈಸೂರಿನಿಂದ- ಚಾಮರಾಜ ನಗರ, ಗುಂಡ್ಲುಪೇಟೆ, ಹಾಸನ, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಹಾಗೂ ಇನ್ನಿತರ ಸ್ಥಳಗಳ ಕಡೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( ಕೆಎಸ್‌ಆರ್‌ಟಿ ಸಿ) ಬಸ್ಸುಗಳು ಸಂಚರಿಸುತ್ತವೆ. ಇಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿದ್ದರೂ, ಬಸ್ ತಂಗುದಾಣದಿಂದ ಸುಮಾರು ೫೦ -೧೦೦ ಮೀಟರ್‌ಗಳಷ್ಟು ಹಿಂದೆ ಅಥವಾ ಮುಂದೆ ರಸ್ತೆಯಲ್ಲಿ ಬಸ್ ನಿಲ್ಲಿಸುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ಪ್ರಯಾಣಿಕರು, ಅದರಲ್ಲೂ ಮುಖ್ಯವಾಗಿ ಮಕ್ಕಳೊಂದಿಗೆ ಬರುವ ಮಹಿಳೆಯರು ಹಾಗೂ ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ. ವಾಹನ ಸಂಚಾರವಿರುವ ಸ್ಥಳದಲ್ಲೆ ಬಸ್‌ಗಳನ್ನು ನಿಲ್ಲಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುತ್ತದೆ.

ಈ ಸ್ಥಳದಲ್ಲಿ ಪ್ರತಿ ದಿನ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರು ಈ ಸಮಸ್ಯೆಯನ್ನು ಕಂಡೂ ಕಾಣದಂತೆ ಇರುವುದು ಬೇಸರದ ಸಂಗತಿಯಾಗಿದೆ.

ಮೈಸೂರು ನಗರದ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಮೈಸೂರು ನಗರದ ಪೊಲೀಸ್ ಆಯುಕ್ತರು ಬಸ್ ನಿಲ್ದಾಣದಲ್ಲಿಯೇ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಸಾರಿಗೆ ನಿಗಮದ ಬಸ್ ಚಾಲಕರಿಗೆ ಸೂಕ್ತ ನಿರ್ದೇಶನ ನೀಡಬೇಕು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು

 

 

Tags:
error: Content is protected !!