ರಾಜ್ಯದಲ್ಲಿ ನಿಷೇಧ ಹೇರಲಾಗಿದ್ದ ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ. ಏಕೆಂದರೆ ಈ ಬೈಕ್ ಟ್ಯಾಕ್ಸಿಗಳು ಕೈಗೆಟುವ ದರದಲ್ಲಿ ಸೇವೆ ಒದಗಿಸುತ್ತಿದ್ದರಿಂದ ಮತ್ತು ಸಮಯವನ್ನು ಉಳಿಸುತ್ತಿದ್ದರಿಂದ ಬಡ, ಮಧ್ಯಮವರ್ಗದವರು, ವಿದ್ಯಾರ್ಥಿಗಳು, ಮಹಿಳೆಯರು ಬೈಕ್ ಟ್ಯಾಕ್ಸಿಗಳನ್ನು ಅವಲಂಬಿಸುತ್ತಿದ್ದರು.
ಕೆಲವು ಕಾಲೇಜು ವಿದ್ಯಾರ್ಥಿಗಳೂ ಇದನ್ನು ಅರೆಕಾಲಿಕ ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಇದರಿಂದ ಬಂದ ಸಂಪಾದನೆಯಿಂದ ತಮ್ಮ ಖರ್ಚನ್ನು ಸರಿದೂಗಿಸಿಕೊಳ್ಳುತ್ತಿದ್ದರು. ಸದ್ಯ ಇದಕ್ಕೆ ಪೂರಕವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ೧೯೮೮ರ ಮೋಟಾರು ವಾಹನ ಕಾಯ್ದೆ ಅನ್ವಯ ಅಗ್ರಿ ಗೇಟರ್ ಮಾರ್ಗಸೂಚಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಖಾಸಗಿ ಬೈಕ್ ಟ್ಯಾಕ್ಸಿಗಳ ಸೇವೆಯನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅನುಮತಿ ಕೊಡಬಹುದು ಎಂದು ಆದೇಶಿಸಿದೆ.
ಇದರಿಂದಾಗಿ ದುಪ್ಪಟ್ಟು ಹಣ ಕೊಟ್ಟು ಇನ್ನಿತರ ವಾಹನ ಬಳಸಬೇಕಾದ ಅನಿವಾರ್ಯತೆ ದೂರಾಗಲಿದೆ. ರಾಜ್ಯ ಸರ್ಕಾರ ಕೂಡ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸುರಕ್ಷಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಇದಕ್ಕೆ ಅನುಮತಿ ನೀಡಬೇಕಿದೆ.
– ದರ್ಶನ್ ಚಂದ್ರ .ಎಂ. ಪಿ., ಮುಕ್ಕಡಹಳ್ಳಿ, ಚಾಮರಾಜನಗರ