Mysore
22
overcast clouds

Social Media

ಬುಧವಾರ, 07 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮೌಲ್ಯನಿಷ್ಠ ರಾಜಕಾರಣದ ಕೊಂಡಿಯೊಂದು ಕಳಚಿದಂತೆ

ಓದುಗರ ಪತ್ರ

ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿಧನದಿಂದ ಮೌಲ್ಯನಿಷ್ಠ ರಾಜಕಾರಣದ ಒಂದು ಕೊಂಡಿಕಳಚಿದಂತಾಗಿದೆ. ಸರಳ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದ ನಾಗೇಶ್ ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲೂ ತಮ್ಮತನ ಮೆರೆದಿದ್ದರು. ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಇವರು, ತಾವು ಸಚಿವರೆಂಬ ಯಾವುದೇ ರೀತಿಯ ಹಮ್ಮ ಬಿಮ್ಮು ತೋರದೆ ಜನ ಸಾಮಾನ್ಯರಲ್ಲಿ ಒಬ್ಬರ ಹಾಗೆ ಬಸ್ಸು ಹಾಗೂ ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿ, ಮಾದರಿ ಸಚಿವರಾಗಿದ್ದರು.  ಮೌಲ್ಯ ಹಾಗೂ ಧ್ಯೇಯನಿಷ್ಠ ರಾಜಕಾರಣಿಯ ನಿಧನ ಖಂಡಿತವಾಗಿಯೂ ರಾಜ್ಯ ರಾಜಕೀಯಕ್ಕೆ ದೊಡ್ಡ ನಷ್ಟವೆಂದೇ ಹೇಳಬಹುದು.

-ಕೆ.ವಿ.ವಾಸು, ಮೈಸೂರು

Tags:
error: Content is protected !!