Mysore
30
few clouds

Social Media

ಶನಿವಾರ, 21 ನವೆಂಬರ್ 2026
Light
Dark

ಬಿಳಿಗಿರಿರಂಗನ ಬೆಟ್ಟದ ಗೇಮ್ ರೋಡ್‌ನಲ್ಲಿ ಒಂಟಿ ಸಲಗ, ಒಂದು ಗಂಟೆ ಕಾದ ವಾಹನ ಸವಾರರು

ಯಳಂದೂರು:  ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುತ್ತಿದ್ದ ಸವಾರರು ಗುರುವಾರ ಸುಮಾರು ಒಂದು ಗಂಟೆ ರಸ್ತೆಯಲ್ಲೇ ಕಾಯಬೇಕಾಯಿತು. ಕಾರಣ, ಗೇಮ್ ರೋಡ್‌ನ ಮಧ್ಯದಲ್ಲೇ ಅಡ್ಡವಾಗಿ ನಿಂತಿದ್ದ ಒಂಟಿ ಸಲಗ!

ಮುಂದೆ ಹೋಗಲು ಭಯ, ಹಿಂದೆ ತಿರುಗಲು ಜಾಗವಿಲ್ಲ. ನೋಡನೋಡುತ್ತಿದ್ದಂತೆ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತವು. ಕೆಲವರು ವಾಹನದೊಳಗೇ ಕುಳಿತರೆ, ಇನ್ನು ಕೆಲವರು ದೂರದಿಂದಲೇ ಸಲಗದ ಫೋಟೋ, ವಿಡಿಯೋ ಸೆರೆಹಿಡಿದರು. ಪ್ರವಾಸಿಗರಿಗೆ ರಸ್ತೆಯಲ್ಲೇ ಸಲಗವನ್ನು ನೋಡುವ ಅಪರೂಪದ ಅವಕಾಶ ಸಿಕ್ಕಿತು.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸವಾರರಿಗೆ ಸೂಚನೆ ನೀಡಿ ಸಂಚಾರ ನಿಯಂತ್ರಿಸಿದರು. ಸುಮಾರು ಒಂದು ಗಂಟೆಯ ಬಳಿಕ ಸಲಗ ತಾನಾಗಿಯೇ ರಸ್ತೆ ಬಿಟ್ಟು ಕಾಡಿನೊಳಗೆ ಹೋಯಿತು. ಆ ಬಳಿಕ ವಾಹನ ಸಂಚಾರ ಎಂದಿನಂತೆ ಆರಂಭವಾಯಿತು.

Tags:
error: Content is protected !!