ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿಬರುವ – ಬಸ್ಸುಗಳಲ್ಲಿ ಪ್ರಯಾಣಿಕರಿಗೆ ನಮ್ಮ ಹೆಮ್ಮೆಯ ನಂದಿನಿಯ ಬಾದಾಮಿ ಹಾಲು, ಮಜ್ಜಿಗೆ, ಲಸ್ಸಿ , ನಂದಿನಿ ಶುದ್ಧ ಕುಡಿಯುವ ನೀರು ಬಾಟಲ್ಗಳಲ್ಲಿ ಹಾಗೂ ಬಾಕ್ಸ್‌ಗಳಲ್ಲಿ ದೊರೆಯುತ್ತವೆ.
ಇದೇ ರೀತಿ ಶತಾಬ್ದಿ ಎಕ್ಸ್‌ಪ್ರೆಸ್ ಹಾಗೂ ಬಸವ, ಮತ್ತು ವಂದೇ ಭಾರತ್ ರೈಲುಗಳಲ್ಲಿ ನಂದಿನಿಯ ಈ ಉತ್ಪನ್ನಗಳು ಸಿಗುವ ವ್ಯವಸ್ಥೆಯಾಗಬೇಕು. ಹೆಚ್ಚಿನ ಪ್ರಯಾಣಿಕರು ಸಂಚರಿಸುವ ರೈಲುಗಳಲ್ಲಿ ಇಂತಹ ಉತ್ಪನ್ನಗಳು ದೊರೆತೆರೆ ಗ್ರಾಹಕರಿಗೂ ಸಹಕಾರಿ, ಸಂಸ್ಥೆಯ ವರಮಾನವೂ ವೃದ್ಧಿಸುತ್ತದೆ. ರೈಲ್ವೆ ರಾಜ್ಯ ಸಚಿವರಾದ ಸೋಮಣ್ಣ ಅವರು ನಮ್ಮವರೇ ಆಗಿರುವುದರಿಂದ ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರೆ ‘ನಮ್ಮ ನಂದಿನಿ’ಗೂ ಸಾವಿರಾರು ಕಿ.ಮೀ. ರೈಲಿನಲ್ಲಿ ಪ್ರಯಾಣಿಸುವ ಯೋಗ ಬರುತ್ತದೆ.
– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು



