Mysore
31
few clouds

Social Media

ಶನಿವಾರ, 21 ನವೆಂಬರ್ 2026
Light
Dark

ಹಾರಂಗಿ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ವಿನೋದ್‌ ಮೃತದೇಹ ಪತ್ತೆ, ಎರಡು ದಿನಗಳ ಶೋಧ ಅಂತ್ಯ

ಕೊಡಗು: ಜಿಲ್ಲೆಯ ಕುಶಾಲನಗರ ಸಮೀಪದ ಹೇರೂರು ಗ್ರಾಮದ ಹಾರಂಗಿ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದೆ.

ಹೇರೂರು ಹಾಡಿಯ 27 ವರ್ಷದ ವಿನೋದ್‌ ಎಂಬಾತನೇ ಮೃತ ಯುವಕನಾಗಿದ್ದಾನೆ.

ನೀರುಕಾಗೆ ಹಿಡಿಯಲು ಹಿನ್ನೀರಿಗೆ ಇಳಿದಿದ್ದ ವಿನೋದ್‌, ಕಾಲು ಜಾರಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದನು. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಎರಡು ದಿನಗಳಿಂದ ಶೋಧ ನಡೆಸಿದ್ದರು.

ವಿನೋದ್‌ ಅವರ ಮೃತದೇಹ ನೀರಿನ ಮೇಲ್ಮೈಗೆ ಬಂದಾಗ ಸ್ಥಳೀಯರು ಅದನ್ನು ಹೊರತೆಗೆದಿದ್ದಾರೆ. ಸುಂಟಿಕೊಪ್ಪ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!