ನಂಜನಗೂಡು ರೈಲು, ಬಸ್, ಕಾರು ಇತ್ಯಾದಿ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೆ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಬಸ್ ಸೇವೆ ಆರಂಭವಾಗಿದ್ದು, ಮೈಸೂರು- ನಂಜನಗೂಡು ನಡುವೆ ಎಂಬುದು ವಿಶೇಷ. ಮೈಸೂರು ರಾಜರ ಆಡಳಿತ ಕಾಲ ದಲ್ಲಿ ರಾಜ್ಯ ದಲ್ಲೇ ಪ್ರಥಮ ಬಾರಿಗೆ ಸಾರ್ವಜ ನಿಕರಿಗೆ ಸಾರಿಗೆ ಸೇವೆ ಒದಗಿಸಿ ದ ಕೀರ್ತಿಗೆ ವಲ್ಕನ್ ಬಸ್ ಸರ್ವೀಸ್ ಸಂಸ್ಥೆ ಭಾಜನವಾಗಿ ದೆ. ಈ ಸಂಸ್ಥೆಯಲ್ಲಿ ೫-೬ ಬಸ್‌ಗಳಿ ದು, ಮೈಸೂರು- ನಂಜನಗೂಡು ನಡುವೆ ಸಂಚರಿಸುತ್ತಿದ್ದವು ೧೯೨೦ರಲ್ಲಿ ಈ ಸಂಸ್ಥೆ ಬಸ್ ಸೇವೆ ಆರಂಭಿಸಿತ್ತು. ಯಳಂದೂರು ಜಹಗೀರ್ ದಾರರ ಮನೆತನಕ್ಕೆ ಸೇರಿದ್ದ ಜಿ. ಕೃಷ್ಣಮೂರ್ತಿ ಅವರು ಈ ಸಂಸ್ಥೆಯ ಮಾಲೀಕರಾಗದ್ದರು. ಇವರ ತಾತ ಗುರುರಾಯರು ನಂಜನಗೂಡಿನಲ್ಲಿ ಮೊಟ್ಟಮೊದಲ ತಲೆಮಾರಿನ ವಕೀಲರ ಗುಂ೨ಗೆ ಸೇರಿ ದರು.
೧೯೨೯ರಲ್ಲಿ ನಂಜನಗೂಡಿಗೆ ಗೃಹೋಪಯೋಗಿ ವಿದ್ಯುಚ್ಛಕ್ತಿ: ನಂಜನಗೂಡಿಗೆ ಮೊಟ್ಟಮೊ ದಲ ಗೃಹಪಯೋಗಿ ವಿದ್ಯುಚ್ಛಕ್ತಿ ಬಂದದ್ದು ೧೯೨೯ರಲ್ಲಿ. ಬಿ.ಎಂ.ಶಿವರಾಮಯ್ಯ ಎಂಬವರು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆದ ಮೊದಲಿಗರು. ಇವರು ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರ ಸಹೋ ದರ. ರಾಷ್ಟ್ರಪತಿ ರಸ್ತೆಯಲ್ಲಿ ಇರುವ ನೀಲಕಂಠೇಶ್ವರ ಶಾಲೆಯ ಆವರಣ ದಲ್ಲಿಯೇ ಇವರ ಮನೆ ಇತ್ತು.
ಮೈಸೂರು- ನಂಜನಗೂಡಿಗೆ ಬಸ್ ಸಂಪರ್ಕ ಕಲ್ಪಿಸಿದ್ದ ಮೊದಲ ಸಂಸ್ಥೆ
