Mysore
20
broken clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

ಶತಾಯುಷಿ ಸುತಾರ್ ವಿಧಿವಶ ; ದೇಶ-ವಿದೇಶ ನಾಯಕರ ಪ್ರತಿಮೆ ಕೆತ್ತಿದ್ದ ಹೆಗ್ಗಳಿಕೆ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್‌ ಸುತಾರ್‌ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡುರ್‌ ಗ್ರಾಮದಲ್ಲಿ 1925ರ ಫೆ.19 ರಂದು ಜನಿಸಿದ್ದ ಅವರು ವಯೋ ಸಹಜ ಕಾಯಿಲೆಯಿಂದ ಡಿ.18ರಂದು ಬೆಳಿಗ್ಗೆ ನೋಯ್ಡಾ ನಿವಾಸದಲ್ಲಿ ಕೊನೆಯುಸಿರೆದಿರುವಾಗಿ ಮೂಲಗಳು ತಿಳಿಸಿವೆ.

ಗುಜರಾತ್‌ನಲ್ಲಿ ವಿಶ್ವದ ಅತಿ ಎತ್ತರ ಪ್ರತಿಮೆ, ಏಕತಾ ಪ್ರತಿಮೆ ಮತ್ತು ಬೆಂಗಳೂರಿನ ಕೆಂಪೆಗೌಡರ 108 ಅಡಿ ಎತ್ತರದ ಬೃಹತ್‌ ಪ್ರತಿಮೆ ಕೆತ್ತಿದ್ದು, ಇವರ ಶೈಲಿಗಳು ಫ್ರೆಂಚ್‌ ಮತ್ತು ಇಟಾಲಿಯಾನ್‌ ಶಿಲ್ಪಿಗಳಿಗೆ ಹೋಲಿಸಲಾಗುತ್ತದೆ. ಹೀಗೆ ಸುತಾರ್‌ ರವರು ತಮ್ಮ ಸುಧೀರ್ಘ ವೃತ್ತಿ ಜೀವನದಲ್ಲಿ, 150ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ 350 ಕ್ಕೂ ಹೆಚ್ಚು ಪ್ರತಿಮೆಗಳನ್ನು ವಿನ್ಯಾಸಗೊಳಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀರಾಮ್‌ ವಿ. ಸುತಾರ್‌ ಅವರು ದೇಶದ ದಂತಶಿಲ್ಪಿಯಾಗಿದ್ದರು. ಅವರ ಈ ನಿಧನವು ತೀವ್ರ ದುಃಖವನ್ನು ತಂದಿದೆ. ಅವರ ಶಿಲ್ಪಕಲೆ , ವಿನ್ಯಾಸಗಳು ನಿಜಕ್ಕೂ ನಮಗೆಲ್ಲಾ ಸ್ಪೂರ್ತಿಯನ್ನು ತಂದುಕೊಟ್ಟಿದೆ ಎಂದು ಶಿಲ್ಪಿಯೋಗಿ ಅರುಣ್‌ ಯೋಗಿರಾಜ್‌ ಟ್ವೀಟ್‌ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Tags:
error: Content is protected !!