Mysore
32
broken clouds

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ 

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ ಅವರು ಸರ್ಕಾರವನ್ನು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೈಗೊಂಡಿರುವ ಕ್ರಮ ಮೆಚ್ಚುವಂತಹದ್ದು.

ನಟಿ ರಮ್ಯಾ, ಮಹಿಳಾ ತಜ್ಞೆ ಜೋಸ್ನಾ ಹಾಗೂ ಇತರೆ ಪರಿಣತರೊಂದಿಗೆ ಮಹತ್ವದ ಸಭೆ ನಡೆಸಿದ ನಂತರ ಋತುತಾರೆ ಎಂಬ ಹೆಸರಿನಲ್ಲಿ ಯೋಜನೆ ಘೋಷಿಸಿದ ಸಚಿವರು, ತಾರೆಯನ್ನೇ ಬ್ರಾಂಡ್ ಅಂಬಾಸಿಡಾರ್ ಆಗಿ ನೇಮಕ ಮಾಡಿರುವುದು ಶ್ಲಾಘನೀಯ.

೪೦ ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸಾಮಾನ್ಯವಾಗಿ ಋತುಬಂಧ ಸಮಯದಲ್ಲಿ ಗರ್ಭಕೋಶದ ಸಮಸ್ಯೆ, ಅಧಿಕ ರಕ್ತಸ್ರಾವ ಹಾಗೂ ದೇಹದಲ್ಲಿ ಪೋಷಕಾಂಶದ ಕೊರತೆ,ಮೂಳೆ ಸಂಬಂಧಿ ಕಾಯಿಲೆಗಳು ಹಾಗೂ ಮಾನಸಿಕ ತೊಂದರೆ ಉಂಟಾಗಿ ಯಾವ ಯಾವ ಸಮಯದಲ್ಲಿ ಸರಿಯಾದ ಆರೈಕೆ ಹಾಗೂ ಔಷಧ ಮುಖ್ಯ ಎಂಬ ಮಾಹಿತಿ ನೀಡುವ ಗೃಹಾರೋಗ್ಯ ಪುಸ್ತಕ ಹೊರತಂದು ಋತುತಾರೆ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವರು ಹೇಳಿರುವುದು ಅವರ ಕಳಕಳಿಯನ್ನು ತೋರಿಸುತ್ತದೆ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

Tags:
error: Content is protected !!