Mysore
23
scattered clouds
Light
Dark

ಓದುಗರ ಪತ್ರ| ಪರಿಸರ ಸ್ನೇಹಿ ಗಣಪತಿ ಪೂಜಿಸೋಣ

ದೇಶದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶನ ಹಬ್ಬ ಪ್ರಮುಖವಾದದ್ದು. ಎಲ್ಲ ಜನರೂ ಒಗ್ಗಟ್ಟಿನಿಂದ ಗಣೇಶನ ಮೂರ್ತಿಗಳನ್ನು ಕೂರಿಸಿ, ಪೂಜಿಸುವ ಹಬ್ಬ ಇದು.

ಇನ್ನೇನು ಕೆಲ ದಿನಗಳಲ್ಲಿ ಗಣೇಶ ಹಬ್ಬ ಬರಲಿದ್ದು, ಎಲ್ಲ ಗ್ರಾಮಗಳಲ್ಲಿಯೂ ಭರದಿಂದ ತಯಾರಿ ನಡೆಸಲಾಗುತ್ತಿದೆ. ಹಬ್ಬದ ದಿನ ಸಮೀಪವಾಗುತ್ತಿದ್ದಂತೆಯೇ ಬಣ್ಣ ಬಣ್ಣದ ಗಣಪನ ವಿಗ್ರಹಗಳು ಮಾರುಕಟ್ಟೆಗೆ ಬರುತ್ತವೆ. ಇವುಗಳಲ್ಲಿ ಬಹುಪಾಲು ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಕೂಡಿದ್ದು, ಇವುಗಳನ್ನು ಖರೀದಿಸಿ ಪೂಜಿಸಿದ ಬಳಿಕ ಅವುಗಳನ್ನು ನೀರಿನ ಮೂಲಗಳಲ್ಲಿ ವಿಸರ್ಜಿಸಲಾಗುತ್ತದೆ. ಇದರಿಂದಾಗಿ ಕೆರೆ-ಕಟ್ಟೆಗಳು, ನದಿಗಳು ಮಾಲಿನ್ಯವಾಗುತ್ತವೆ. ಅಲ್ಲದೆ ಜಲಚರಗಳ ಜೀವಕ್ಕೂ ಅಪಾಯವನ್ನು ತಂದೊಡ್ಡುತ್ತವೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿ ಮೂರ್ತಿಗಳ ಉತ್ಪಾದನೆಗೆ ನಿಷೇಧವನ್ನೇರಿ ಅವುಗಳನ್ನು ಬಳಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇನ್ನು ಮುಂದಾದರೂ ಆಯೋಜಕರು ಪರಿಸರ ಸ್ನೇಹಿ ಗಣಪತಿಯನ್ನು ಕೂರಿಸಿ ಪೂಜಿಸುವ ಜತೆಗೆ ಅಕ್ಕಪಕ್ಕದ ಮನೆಯವರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಆ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕಿದೆ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.