Mysore
28
few clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಕೃತಕ ಬುದ್ದಿಮತ್ತೆ ಇನ್ನು ಮುಕ್ತ ಮುಕ್ತ

ಕೃತಕ ಬುದ್ಧಿಮತ್ತೆ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತಿದ್ದು, ಎಲ್ಲ ದೇಶಗಳ ಹೊಸ ಹೊಸ ತಂತ್ರಜ್ಞಾನವನ್ನು ಕೃತಕ ಬುದ್ಧಿಮತ್ತೆಗೆ ವಿಸ್ತರಿಸಲಾಗುತ್ತಿದೆ.

ಈಗ ಚೀನಾದ ದೈತ್ಯ ‘ಡೀಪ್ ಸೀಕ್’ ಭಾರಿ ಸ್ಪರ್ಧೆ ಒಡ್ಡಿದ ಬೆನ್ನಲ್ಲೇ ‘ಒಪನ್ ಎಐ’ಯಿಂದ ಹೊಸ ಎಐ ಟೂಲ್ ‘ಡೀಪ್ ರಿಸರ್ಚ್’ ಬಿಡುಗಡೆಗೊಂಡಿದ್ದು, ಇದು ಕಠಿಣ ವಿಷಯಗಳ ಬಗ್ಗೆ ಬಹುಸ್ತರದ ಸಂಶೋಧನಾ ವರದಿಯನ್ನು ತಯಾರಿಸಿಕೊಡುತ್ತದೆ ಎಂದು ಕಂಪೆನಿ ಹೇಳಿದೆ.

ಮುಂಬರುವ ಒಪನ್ ಎಐ ೦೩ ಆವೃತ್ತಿಯಲ್ಲಿ ಇದು ಲಭ್ಯವಾಗಲಿದ್ದು, ದತ್ತಾಂಶ ವಿಶ್ಲೇಷಣೆ ಹಾಗೂ ವೆಬ್ ಬ್ರೌಸಿಂಗ್‌ಗೆ ಇದು ಉಪಯೋಗವಾಗಲಿದೆ ಎಂದು ಒಪನ್ ಎಐ ಹೇಳಿದೆ. ಬಳಕೆದಾರರು ಒಪನ್ ಎಐನ ಚಾಟ್ ಬಾಕ್ಸ್ ಚಾಟ್ ಜಿಪಿಟಿ ಮೂಲಕ ಇದನ್ನು ಬಳಕೆ ಮಾಡಬಹುದು. ಚಾಟ್ ಜಿಟಿಪಿಯಲ್ಲಿ ಬೇಕಾದ ಮಾಹಿತಿಯ ಬಗ್ಗೆ ಕಮಾಂಡ್ ನೀಡಿದರೆ, ಆನ್‌ಲೈನ್‌ನಲ್ಲಿ ಬರಹ, ಚಿತ್ರ ಹಾಗೂ ಪಿಡಿಎಫ್ ರೂಪದಲ್ಲಿ ಲಭ್ಯವಿರುವ ಹಲವು ಮಾಹಿತಿಗಳ ವರದಿ ತಯಾರಿಸಿ ನೀಡಲಿದೆ. ಚಾಟ್ ಜಿಪಿಟಿಯ ವೆಬ್ ಆವೃತ್ತಿಯಲ್ಲಿ ಇದು ಕಳೆದ ಭಾನುವಾರದಿಂದಲೇ ಲಭ್ಯವಿದ್ದು, ಮೊಬೈಲ್ ಹಾಗೂ ಆಪ್‌ಗಳಲ್ಲಿ ಫೆಬ್ರವರಿ ಅಂತ್ಯದೊಳಗೆ ಲಭ್ಯವಾಗಲಿದೆ ಎಂದು ಒಪನ್ ಎಐ ತಿಳಿಸಿದೆ. ಸದ್ಯಕ್ಕೆ ಆರಂಭಿಕ ಹಂತದಲ್ಲಿದ್ದು, ಕೆಲವೊಂದು ಮಿತಿಗಳನ್ನು ಹೊಂದಿದೆ. ವಿಶ್ವಾಸಾರ್ಹ ಮಾಪನಾಂಕ ನಿರ್ಣಯದಲ್ಲಿ ದೌರ್ಬಲ್ಯಗಳನ್ನು ಹೊಂದಿದೆ ಎಂದು ತಿಳಿಸಿದೆ.

Tags: