Mysore
24
few clouds

Social Media

ಮಂಗಳವಾರ, 14 ಏಪ್ರಿಲ 2026
Light
Dark

ಮೈಸೂರು ಪ್ರಯಾಣಿಕರೇ ಗಮನಿಸಿ ಜನವರಿ 20ರಂದು ವಿಳಂಬವಾಗಲಿದೆ ಈ ರೈಲುಗಳ ಸಂಚಾರ

ಭಾರತೀಯ ರೈಲ್ವೆ ಇಲಾಖೆ ವಿವಿಧೆಡೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣದಿಂದಾಗಿ ಕೆಲ ರೈಲುಗಳ ಸಂಚಾರ ವಿಳಂಬವಾಗಲಿದೆ ಹಾಗೂ ಕೆಲ ರೈಲುಗಳು ಭಾಗಶಃ ರದ್ದಾದರೆ, ಇನ್ನೂ ಕೆಲ ರೈಲುಗಳು ಸಂಪೂರ್ಣವಾಗಿ ರದ್ದಾಗಲಿವೆ. ಇನ್ನು ಮೈಸೂರು ರೈಲ್ವೆ ವ್ಯಾಪ್ತಿಯ ಮಂದಗೆರೆ ನಿಲ್ದಾಣದಲ್ಲಿ ಸಿಗ್ನಲಿಂಗ್‌ ಕಾಮಗಾರಿ ನಡೆಯುವುದರಿಂದ ಜನವರಿ 20ರಂದು ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಇರಲಿದೆ. ಈ ಕುರಿತಾದ ಮಾಹಿತಿಯನ್ನು ರೈಲ್ವೆ ಇಲಾಖೆ ಹಂಚಿಕೊಂಡಿದ್ದು, ಕೆಳಕಂಡಂತಿದೆ.. 

* ರೈಲು ಸಂಖ್ಯೆ 16207 ಯಶವಂತಪುರ – ಮೈಸೂರು ಎಕ್ಸ್‌ಪ್ರೆಸ್‌ ಜನವರಿ 20ರಂದು ಹಾಸನ ಹಾಗೂ ಮೈಸೂರು ನಡುವೆ ಭಾಗಶಃ ರದ್ದಾಗಲಿದೆ.

* ರೈಲು ಸಂಖ್ಯೆ 06267 ಅರಸಿಕೆರೆ – ಮೈಸೂರು ವಿಶೇಷ ಪ್ಯಾಸೆಂಜರ್‌ ಎಕ್ಸ್‌ಪ್ರೆಸ್‌ ಜನವರಿ 20ರಂದು 90 ನಿಮಿಷ ತಡವಾಗಿ ಅರಸಿಕೆರೆ ನಿಲ್ದಾಣದಿಂದ ಹೊರಡಲಿದೆ.

* ರೈಲು ಸಂಖ್ಯೆ 06269 ಮೈಸೂರು – ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಜನವರಿ 20ರಂದು ಮೈಸೂರು ನಿಲ್ದಾಣದಿಂದ 90 ನಿಮಿಷ ತಡವಾಗಿ ಹೊರಡಲಿದೆ.

* ರೈಲು ಸಂಖ್ಯೆ 06214 ಮೈಸೂರು – ಅರಸಿಕೆರೆ ವಿಶೇಷ ಎಕ್ಸ್‌ಪ್ರೆಸ್‌ ಜನವರಿ 20ರಂದು ಸಂಚರಿಸುವ ವೇಳೆಯೇ ನಿಯಂತ್ರಿಸಲ್ಪಡುವುದರಿಂದ ಸಂಚಾರದಲ್ಲಿ 45 ನಿಮಿಷ ತಡವಾಗಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!