ಬೆಂಗಳೂರು: ರಾಜ್ಯಾದ್ಯಂತ ಇನ್ನೊಂದು ವಾರ ಬಿಸಿಲಿ ಝಳ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರುನಾಡು ಬಿಸಿಲ ಧಗೆಗೆ ಬಳಲಿ ಬೆಂಡಾಗಿದ್ದು, ರಣಬೇಸಿಗೆಗೆ ಜನ ಹೈರಾಣಾಗಿದ್ದಾರೆ. ರಾಯಚೂರು ಹಾಗೂ ಕಲಬುರ್ಗಿಯಲ್ಲಿ ಉಷ್ಣಾಂಶ 41 ಡಿಗ್ರಿ ದಾಟಿದೆ. ಬೆಂಗಳೂರಿನಲ್ಲಿ 36-37 ಡಿಗ್ರಿ ಉಷ್ಣಾಂಶವಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೊಂದು ವಾರ 40-42 ಡಿಗ್ರಿ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಉಷ್ಣಾಂಶ ಹೆಚ್ಚಾಗಲಿದ್ದು, ಹಗಲು ಮಾತ್ರವಲ್ಲ, ರಾತ್ರಿ ವೇಳೆಯಲ್ಲೂ ಉಷ್ಣಾಂಶ ಹೆಚ್ಚಾಗಿರುವುದರಿಂದ ವಿಪರೀತ ಸೆಕೆಯಾಗಲಿದೆ ಎಂದು ಹೇಳಲಾಗುತ್ತಿದೆ.





