ಬಂಡಾಯದ ಹೊಳೆ
ಮಿಂಚು ಹೂಮಳೆ !
ಅತಿವೃಷ್ಟಿ,ಅನಾವೃಷ್ಟಿಯ ವರದಿ
ಬರೆಯುತಿಹರಂತೆ ಸಚಿವರು…
ಒಂಬತ್ತು ಜಿಗಳಲ್ಲಿ
ಮೋಡ ಕವಿದ ವಾತಾವರಣ,
ಕಾರಣ, ಅಲ್ಲಿಗಿಲ್ಲ ಮಂತ್ರಿ ಗಿರಿ !
ನುಚ್ಚುನೂರಾಯಿತಂತೆ
ಹಲವು ಶಾಸಕರ ಕನಸು…
ಬರ ಸಿಡಿಲು, ಗುಡುಗು ಜೋರು
ಹಾದಿ ಬೀದಿಗಳಲ್ಲಿ ಬೆಂಕಿ ಟೈರು
ಅಲ್ಲಲ್ಲಿ ಹರಿಯುತ್ತಿಹುದು
ಬಂಡಾಯದ ಹೊಳೆ
ತಾವು ಹೆಜ್ಜೆಯಿಟ್ಟಲ್ಲಿ
ಮಿರಿ ಮಿರಿ ಮಿಂಚು ಹೂಮಳೆ !
-ಮ.ಗು.ಬಸವಣ್ಣ, ಮೈಸೂರು


