Mysore
27
scattered clouds
Light
Dark

ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ 7 ಮಂದಿ ಜೈಲು ಸಿಬ್ಬಂದಿಯನ್ನು ಸಸ್ಪೆಂಡ್‌ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈಯಲ್ಲಿ ಕಾಫಿ ಕಪ್‌ ಇಟ್ಟುಕೊಂಡಿರುವ ದರ್ಶನ್‌, ಇತರೆ ಮೂವರೊಂದಿಗೆ ಕುಳಿತುಕೊಂಡಿದ್ದರು. ಅವರ ಮತ್ತೊಂದು ಕೈಯಲ್ಲಿ ಸಿಗರೇಟ್‌ ಇರುವುದು ಫೋಟೋದಲ್ಲಿ ಕಾಣಿಸುತ್ತಿತ್ತು.

ಈ ಫೋಟೋ ವೈರಲ್‌ ಆದ ಬೆನ್ನಲ್ಲೇ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌ ಅವರು, ಜೈಲರ್‌ ಶರಣಬಸವ ಅಮೀನಗಢ, ಸಹಾಯಕ ಜೈಲರ್‌ ಪುಟ್ಟಸ್ವಾಮಿ, ಜೈಲರ್‌ ಹೆಡ್‌ ವಾರ್ಡನ್‌ಗಳಾದ ವೆಂಕಪ್ಪ, ಸಂಪತ್‌, ವಾರ್ಡನ್‌ ಬಸಪ್ಪ, ಪ್ರಭು, ಶ್ರೀಕಾಂತ್‌ ಸೇರಿದಂತೆ ಏಳು ಮಂದಿಯನ್ನು ಸಸ್ಪೆಂಡ್‌ ಮಾಡಲಾಗಿದೆ ಎಂದು ತಿಳಿಸಿದರು.

ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ಹಿರಿಯ ಅಧಿಕಾರಿಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.