ಬೆಂಗಳೂರು: ಅನಾರೋಗ್ಯ ಹಿನ್ನೆಲೆ ತಿಂಗಳ ಹಿಂದೆ ಅಮೆರಿಕಾಗೆ ತೆರಳಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಚಿತ್ರನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಸಂಪೂರ್ಣ ಚೇತರಿಸಿಕೊಂಡು ಭಾನುವಾರ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವಣ್ಣನಿಗೆ ಅಭಿಮಾನಿಗಳು ಅದ್ದೂರು ಸ್ವಾಗತ ಕೋರಿದರು.
ಬೃಹತ್ ಗಾತ್ರದ ಸೇಬಿನ ಹಾರ, ಹೂವಿನ ಸುರಿಮಳೆ ಸುರಿಸಲಾಯಿತು. ಮನೆಯ ಬಳಿಯು ಸಹ ಅಭಿಮಾನಿಗಳು ಹೂಮಳೆಯನ್ನೇ ಸುರಿಸಿದ್ದಾರೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿ, ಅಮೆರಿಕಾಗೆ ಹೋಗಬೇಕಾದರೆ ತುಸು ಭಯ ಇತ್ತು. ಇದೀಗ ಸಂಪೂರ್ಣ ಚೇತರಿಕೆಯಿಂದ ಬಂದಿದ್ದೇನೆ ಎಂದರು.
ತಮ್ಮ ಶಸ್ತ್ರ ಚಿಕಿತ್ಸೆಯ ಅನುಭವ ಹೇಳಿಕೊಂಡ ಶಿವಣ್ಣ ಇದೆಲ್ಲಾ ಜೀವನದ ಪಾಠ, ಇದೆಲ್ಲಾ ನಾನು ಧೈರ್ಯವಾಗಿ ಮಾಡಿದೆ ಎಂದಿದ್ದಾರೆ.