Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಪ್ರೀತಂ ಗೌಡ ಇನ್ನೂ ಚಿಕ್ಕ ಹುಡುಗ: ವಿ ಸೋಮಣ್ಣ

ನವದೆಹಲಿ: ಲೋಕಸಭಾ ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಇದರ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿರುವ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಸನದಿಂದ ಪ್ರಜ್ವಲ್ ಗೌಡ ಮತ್ತು ಮಂಡ್ಯದಿಂದ ಎಚ್.ಡಿ ಕುಮಾರಸ್ವಾಮಿ ಸ್ಪರ್ಧೆಗೆ ಬಿಜೆಪಿ ವರಿಷ್ಠರು ಅವಕಾಶ ನೀಡಲ್ಲ ಎಂದು ಪ್ರೀತಂ ಗೌಡ ನೀಡಿರುವ ಹೇಳಿಕೆ ನಿಡಿದ್ದರು.

ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ವಿ.ಸೋಮಣ್ಣ, ಅವನಿನ್ನೂ ಚಿಕ್ಕ ಹುಡುಗ, ರಾಜಕಾರಣದ ಬಗ್ಗೆ ಅಷ್ಟೆಲ್ಲ ಜ್ಞಾನ ಇಲ್ಲ, ಆವೇಶದಲ್ಲಿ ಮಾತಾಡುತ್ತಾನೆ ಎಂದು ಹೇಳಿದರು.

ನವದೆಹಲಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿ.ಸೋಮಣ್ಣ, ಕನ್ನಡಿಗರಿಗೆಲ್ಲ ಗೊತ್ತಿರುವ ಹಾಗೆ, ಪ್ರೀತಂ ಗೌಡ ಅವರು ಅವನು ತಾನಾಡುವ ಭಾಷೆ ಮತ್ತು ಹೇಳಿಕೆಗಳ ಮೇಲೆ ಎಚ್ಚರ ಸಾಧಿಸಬೇಕಿದೆ, ರಾಜಕಾರಣದಲ್ಲಿ ಬೆಳೆಯಬೇಕಾದರೆ ಅದಕ್ಕೆ ಪೂರಕವಾದ ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಮುಂಬರುವ ದಿನಗಳಲ್ಲಿ ಅದನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ ಎಂಬ ನಂಬಿಕೆ ತನಗಿದೆ ಎಂದು ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರಿಗೆ ಕೆಲ ಹಿತವಚನಗಳನ್ನು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!