Mysore
22
overcast clouds

Social Media

ಮಂಗಳವಾರ, 28 ಜುಲೈ 2026
Light
Dark

ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆ ಇಲ್ಲ, ಸುಳ್ಳು ಸುದ್ದಿಗಳನ್ನ ನಂಬಬೇಡಿ ; ಕೆಎಂಎಫ್ ಸ್ಪಷ್ಟನೆ

ಬೆಂಗಳೂರು : ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿರುವ ಕೆಎಂಎಫ್‌ ಸದ್ಯದಲ್ಲೆ ನಂದಿನಿ ಮೊಸರು, ಮಜ್ಜಿಗೆ, ಹಾಗೂ ಲಸ್ಸಿಯ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇದು ಸುಳ್ಳು ಸುದ್ದಿ, ಯಾವುದೇ ದರ ಪರಿಷ್ಕರಣೆ ಪ್ರಸ್ತಾವ ಇಲ್ಲ ಎಂದು KMF ಸ್ಪಷ್ಟನೆ ನೀಡಿದೆ.

ಮೊಸರು, ಮಜ್ಜಿಗೆ, ಅಥವಾ ಲಸ್ಸಿಯ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಇಲ್ಲ. ವಿನಾಕಾರಣ ಸಾಮಾಜಿಕಮಾಧ್ಯಮಗಳಲ್ಲಿ ವದಂತಿ ಹರಡಲಾಗುತ್ತಿದೆ. ಅಂಥ ವದಂತಿಗಳು, ಸುಳ್ಳು ಸುದ್ದಿಗಳನ್ನ ನಂಬಬೇಡಿ ಎಂದು ಸಾರ್ವಜನಿಕರಲ್ಲಿ KMF ವಿನಂತಿ ಮಾಡಿದೆ.

Tags:
error: Content is protected !!