Mysore
26
haze

Social Media

ಗುರುವಾರ, 01 ಜನವರಿ 2026
Light
Dark

ನರೇಗಾಗೆ ಯಾವ ಹೆಸರನ್ನು ಬೇಕಾದರು ಇಡಲಿ ; ಅಭ್ಯಂತರ ಇಲ್ಲ : ಸಚಿವ ಪ್ರಿಯಾಂಕ ಖರ್ಗೆ 

counseling gram panchayat priyank kharge

ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲಿ : ಖರ್ಗೆ

ಬೆಂಗಳೂರು : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಬದಲಾವಣೆ ಮಾಡಿರುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಕೇಂದ್ರ ಸರ್ಕಾರ ಬಯಸುವುದಾದರೆ ನಾಥುರಾಮ್ ಗೋಡ್ಸೆ ಹೆಸರನ್ನೇ ನಾಮಕರಣ ಮಾಡಿಕೊಳ್ಳಲಿ. ಆದರೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಲಿ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಳೀಕರಿಸಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರ ವಿಕಸಿತ್ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಅಭಿಯಾನ ಗ್ರಾಮೀಣ (ವಿಬಿ ಐ ರಾಮ್ ಜಿ) ಕಾಯ್ದೆಯನ್ನು ರೂಪಿಸಲಾಗಿದೆ. ಈ ಕಾಯಿದೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಯಥಾವತ್ತು ರೂಪವಾಗಿದೆ. ಆದರೆ ಜನರ ಹಕ್ಕುಗಳನ್ನು ಕಸಿಯುವಂತೆ ಮಾರ್ಪಾಡು ಮಾಡಲಾಗಿದೆ ಎಂದು ದೂರಿದರು.

ಇದನ್ನು ಓದಿ:ಹುಲಿ ದಾಳಿಗೆ ಅರಣ್ಯ ಸಿಬ್ಬಂದಿ ಬಲಿ 

ಗ್ರಾಮೀಣ ಜನರ ಜೀವನೋಪಾಯ, ಪಂಚಾಯಿತಿಗಳ ಅಧಿಕಾರ ಮತ್ತು ರಾಜ್ಯ ಸರ್ಕಾರಗಳ ಸ್ವಾಯತ್ತತೆಗೆ ಕಾಯ್ದೆಯಿಂದ ಧಕ್ಕೆಯಾಗಿದೆ. ಬೇಡಿಕೆ ಆಧಾರಿತ ಮಾದರಿಯಿಂದ ಪೂರೈಕೆ ಆಧರಿತ ವ್ಯವಸ್ಥೆಗೆ ಯೋಜನೆಯನ್ನು ಬದಲಾಯಿಸಲಾಗಿದೆ. ಈ ಮೊದಲು ಉದ್ಯೋಗ ಕಾರ್ಡ್ ಹೊಂದಿದವರು ದೇಶದ ಯಾವ ಭಾಗದಲ್ಲಾದರೂ ಹೋಗಿ ಕೆಲಸ ಮಾಡಬಹುದಿತ್ತು. ಹೊಸ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಗುರುತಿಸಿದ ಅಥವಾ ನೋಟಿಫೈ ಮಾಡಿದ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡಬೇಕಾಗಿದೆ. ಈ ಮೊದಲು ಕೂಲಿ ಹಣ ಪಂಚಾಯಿತಿಗಳಿಗೆ ನೇರವಾಗಿ ಬಿಡುಗಡೆಯಾಗುತ್ತಿತ್ತು ಈಗ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರ ಕೊರತೆಯಾಗದಂತೆ ಮತ್ತು ಕೂಲಿಯ ದರ ಹೆಚ್ಚಳವಾಗುವುದನ್ನು ತಡೆಯಲು ವರ್ಷದಲ್ಲಿ ೬೦ ದಿನ ಉದ್ಯೋಗ ಖಾತ್ರಿ ಕೆಲಸಗಳಿಗೆ ರಜೆ ನೀಡುವುದಾಗಿ ಹೊಸ ಕಾಯ್ದೆಯಲ್ಲಿ ತಿಳಿಸಲಾಗಿದೆ. ಭೂ ಮಾಲೀಕರ ಜಮೀನುಗಳಲ್ಲಿ ಕೆಲಸ ಮಾಡಲು ಇಚ್ಚಿಸದೆ ಇದ್ದವರಿಗೆ ಇನ್ನು ಮುಂದೆ ಅನ್ಯ ಮಾರ್ಗ ಇಲ್ಲದೆ, ಬಲ್ಲಾಡ್ಯರು ಕೊಟ್ಟಷ್ಟು ಕೂಲಿಗೆ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ವಿವರಿಸಿದ್ದರು.

ಕೇಂದ್ರ ಸರ್ಕಾರ ಈ ಮೊದಲು ಉದ್ಯೋಗ ಖಾತ್ರಿಯ ಸಂಪೂರ್ಣ ಕೂಲಿಯನ್ನು ಪಾವತಿ ಮಾಡುತ್ತಿತ್ತು. ಇನ್ನು ಮುಂದೆ ಶೇ.೬೦ರಷ್ಟು ಮಾತ್ರ ಪಾವತಿಸಲಿದೆ. ರಾಜ್ಯ ಸರ್ಕಾರ ಶೇ.೪೦ರಷ್ಟು ವೆಚ್ಚವನ್ನು ಭರಿಸಬೇಕಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆಲ್ಲ ರಾಜ್ಯದ ಪಾಲಿನ ವೆಚ್ಚವನ್ನು ಹೆಚ್ಚಳ ಮಾಡಲಾಗುತ್ತಿದೆ. ವಿಕಸಿತ ಭಾರತ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವವರಿಗೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಪೂರ್ಣ ಪ್ರಮಾಣದ ಅನುದಾನ ಒದಗಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

Tags:
error: Content is protected !!