Mysore
29
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಓದುಗರ ಪತ್ರ: ಬಜೆಟ್ ಪರಿಸರ ಸಂರಕ್ಷಣೆಗೆ ಒತ್ತು ನೀಡಲಿ

dgp murder case

ಬಜೆಟ್ ಪೂರ್ವ ಸಭೆಯಲ್ಲಿ ಪ್ರಸ್ತಾಪಗೊಂಡ ಹಸಿರು ಗೋಡೆ ಯೋಜನೆ ರಾಜ್ಯದ ಪರಿಸರ ರಕ್ಷಣೆಗೆ ಆಪದ್ಬಾಂಧವನಂತಿದೆ. ಉತ್ತರ ಕರ್ನಾಟಕದಲ್ಲಿ ಮರುಭೂಮೀಕರಣ ತಡೆಗಟ್ಟಲು ಈ ರಕ್ಷಣಾ ಕವಚ ಅನಿವಾರ್ಯ. ಈ ಬಾರಿಯ ಬಜೆಟ್ ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ, ಹವಾಮಾನ ವೈಪರೀತ್ಯ ಎದುರಿಸುವ ದೂರದೃಷ್ಟಿ ಹೊಂದಿರಬೇಕು.

ಇದರೊಂದಿಗೆ ಸರ್ಕಾರವು ಬೆಂಗಳೂರಿನಂತಹ ನಗರಗಳಲ್ಲಿ ನಗರ ಕಿರು ಅರಣ್ಯ ಬೆಳೆಸಲು ಪ್ರೋತ್ಸಾಹ ನೀಡಬೇಕು. ಕೃಷಿಯಲ್ಲಿ ಇಂಗಾಲದ ಮರುಬಳಕೆಗೆ ಒತ್ತು ನೀಡುವ ರೈತರಿಗೆ ಕಾರ್ಬನ್ ಕ್ರೆಡಿಟ್ ಮಾದರಿಯ ವಿಶೇಷ ಸಬ್ಸಿಡಿ ಘೋಷಿಸುವುದು ಪೂರಕವಾಗಿದೆ. ಹಾಗೆಯೇ, ಕೆರೆಗಳ ಪುನಶ್ಚೇತನದ ಜೊತೆಗೆ ಕರಾವಳಿ ಭಾಗದ ಪರಿಸರ ಸಮತೋಲನ ಪಾಡಲು ನೀಲಿ ಬಜೆಟ್ ಪರಿಕಲ್ಪನೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಪರಿಸರ ಸಂರಕ್ಷಣೆಯು ಆರ್ಥಿಕ ಅಭಿವೃದ್ಧಿಯ ಭಾಗವಾದಾಗ ಮಾತ್ರ ರಾಜ್ಯವು ಸುಸ್ಥಿರ ಪ್ರಗತಿ ಸಾಧಿಸಲು ಸಾಧ್ಯ.

– ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು 

Tags:
error: Content is protected !!