ಹುಬ್ಬಳಿ: ಹುಬ್ಬಳಿಯ ನೇಹಾ ಹಾಗೂ ಅಂಜಲಿ ಹಾಗೆಯೇ ನಿನ್ನ ಹತ್ಯೆ ಆಗುತ್ತದೆ ಎಂದು ಶಾಲೆಯ ಮುಖ್ಯಶಿಕ್ಷಕಿಗೆ ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆದಿದ್ದಾನೆ.
ಹುಬ್ಬಳಿಯ ಬೆಂಗೇರಿಯಲ್ಲಿರುವ ರೋಟರಿ ಪ್ರಾಥಮಿಕ ಫ್ರೌಡ ಶಾಲೆಯ ಮುಖ್ಯ ಶಿಕ್ಷಕಿ ದೀಪ ಅಡವಿಮಠ ಎನ್ನುವವರಿಗೆ ಕಳೆದ ಐದು ದಿನಗಳ ಹಿಂದೆ ಅಂಚೆ ಮೂಲಕ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಪತ್ರದಲ್ಲಿ ʼದೀಪಾ ನಿನ್ನ ಹತ್ಯೆ ನೇಹಾ ಮತ್ತು ಅಂಜಲಿ ಹಾಗೇ.. ಕೆಲವೇ ದಿನʼ ಎಂದು ಬರೆದಿದೆ.
ಈ ಬೆದರಿಕೆ ಪತ್ರ ಕುರಿತು ಶಿಕ್ಷಕಿ ದೀಪ, ಕೇಶ್ವಾಪೂರ ಪೊಲೀಸರ ಗಮನಕ್ಕೆ ತಂದಿದ್ದು, ಈ ಹಿನ್ನೆಲೆ ಶಿಕ್ಷಕಿಯ ಮನೆಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಎಸಿಪಿ ಶಿವಪ್ರಕಾಶ್ ನಾಯಕ್ ಶಿಕ್ಷಕಿ ಮನೆಗೆ ಭೇಟಿ ನೀಡಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಶಿಕ್ಷಕಿಯ ಮನೆ ಮುಂದೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನೇಹಾ, ಅಂಜಲಿ ಹತ್ಯೆ ಮಾಸುವ ಮುನ್ನವೇ ಈ ಕೊಲೆ ಬೆದರಿಕೆ ಪತ್ರ ಆತಂಕ ತದ್ದೊಡಿದೆ.