Mysore
25
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಪುತ್ತಿಲಗೆ ಪಕ್ಷ ನಿಷ್ಠೆ ಪಾಠ ಮಾಡಿದ ಸಂಸದ ಪ್ರತಾಪ್‌ ಸಿಂಹ

ಮಂಗಳೂರು: ಇಲ್ಲಿನ ಹಿಂದು ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಸಂಸದ ಪ್ರತಾಪ್‌ ಸಿಂಹ ಅವರು ಪಕ್ಷ ನಿಷ್ಠೆ ಪಾಠ ಮಾಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್‌ ನೀಡುವಂತೆ ಹಿಂದು ಮುಖಂಡ ಅರುಣ್‌ ಕುಮಾ ಪುತ್ತಿಲ ಪಟ್ಟು ಹಿಡಿದ್ದಿದ್ದರು. ಆದರೆ ಬಿಜೆಪಿ ಮಾತ್ರ ಟಿಕೆಟ್‌ ನೀಡಿರಲಿಲ್ಲ. ಇದರಿಂದ ಅಸಮಾಧಾನವಾದ ಪುತ್ತಿಲ ಪರಿವಾರ ಎಂಬ ಸಂಘಟನೆ ಕಟ್ಟಿಕೊಂಡು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಥಿಸಿ ಸೋಲು ಕಂಡರು. ಹಾಗಾಗಿ ಬಿಜೆಪಿ ಮತ್ತು ಪುತ್ತಿಲ ಮಧ್ಯೆ ಆಗಾಗ ಸಂಘರ್ಷ ಏರ್ಪಡುತ್ತಿತ್ತು. ಈ ಇಬ್ಬರ ಜಗಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸಿದ್ದರು. ಲೋಕಸಭೆ ಚುನಾವಣೆ ಹಿನ್ನಲೆ ಪುತ್ತಿಲ ಪರಿವಾರವನ್ನು ಸಂಧಾನದ ಮೂಲಕ ಮತ್ತೆ ಬಿಜೆಪಿಗೆ ಕರೆತರಲಾಗಿದೆ. ಇದೀಗ ಸಂಸದ ಪ್ರತಾಪ್‌ ಸಿಂಹ ಪುತ್ತಿಲಗೆ ಪಕ್ಷ ನಿಷ್ಠೆ ಪಾಠ ಮಾಡಿದ್ದಾರೆ.

ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮತನಾಡಿದ ಪ್ರತಾಪ್‌ ಸಿಂಹ, ಅರುಣ್‌ ಕುಮಾರರವರೇ ನೀವು ಪುತ್ತೂರಿನಲ್ಲಿ ಮಾಡಿದ ಶಕ್ತಿ ಪ್ರದರ್ಶನವನ್ನು ಮೈಸೂರಲ್ಲಿ ಮಾಡುವಷ್ಟು ಶಕ್ತಿ ನನಗೂ ಇದೆ. ಆದರೆ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡಲಿಲ್ಲ. ಯಾಕೆಂದರೆ ನಮಗೆ ಪಕ್ಷ ನಿಷ್ಠೆ ಮುಖ್ಯ ಎಂದು ಹೇಳಿದ್ದಾರೆ.

Tags: