Mysore
23
overcast clouds

Social Media

ಮಂಗಳವಾರ, 02 ಜೂನ್ 2026
Light
Dark

ಓದುಗರ ಪತ್ರ: ಅನಧಿಕೃತ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ

ಮೈಸೂರು ನಗರದ ಹೊರವಲಯಗಳಲ್ಲಿ ಹಾಗೂ ಕೆಲವೊಮ್ಮೆ ಮಧ್ಯಭಾಗದಲ್ಲಿ ಅನಧಿಕೃತವಾಗಿ ವೈದ್ಯ ಜೋಪಡಿಗಳು ತಲೆ ಎತ್ತುತ್ತಿವೆ. ಈ ನಾಟಿ ವೈದ್ಯರು ಆರೋಗ್ಯ ಇಲಾಖೆಯ ಪರವಾನಗಿಯನ್ನೂ ಪಡೆದಿರುವುದಿಲ್ಲ. ಅಲ್ಲಿ ಎಲ್ಲ ರೋಗಗಳಿಗೂ ಮದ್ದನ್ನು ನೀಡಲಾಗುವುದು ಎಂದು ಜಾಹೀರಾತು ಫಲಕಗಳನ್ನು ಪ್ರದರ್ಶನ ಮಾಡುತ್ತಾರೆ.

ಸಾರ್ವಜನಿಕರು ಕುತೂಹಲ ಭರಿತರಾಗಿ ಆ ಜೋಪಡಿಗೆ ಭೇಟಿ ನೀಡಿದರೆ ನಿಮಗೆ ಆ ಕಾಯಿಲೆ ಇದೆ ಈ ಕಾಯಿಲೆ ಇದೆ ಎಂದು ಹೇಳಿ ಅದರ ಉಪಶಮನಕ್ಕಾಗಿ ನಾವು ಈ ಗಿಡಮೂಲಿಕೆಯ ಔಷಧಿಯನ್ನು ನಿಮಗೆ ಕೊಡುತ್ತೇವೆ, ತಕ್ಷಣದಲ್ಲಿ ಪರಿಹಾರವಾಗುವುದೆಂದು ನಂಬಿಸುತ್ತಾರೆ. ಕೆಲವೊಮ್ಮೆ  ಅಡ್ಡ ಪರಿಣಾಮ ಉಂಟಾದರೆ ಸ್ಥಳಾಂತರ ಮಾಡುವ ಇವರನ್ನು ಹುಡುಕಲು ಸಾಧ್ಯವಾಗುವುದಿಲ್ಲ.

ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗಳು ಇತ್ತ ಗಮನ ಹರಿಸಿ ಅನಽಕೃತವಾಗಿ ಚಿಕಿತ್ಸೆ ನೀಡುತ್ತಿರುವ ಇಂಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು.

-ಎ.ಎಸ್.ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.

Tags:
error: Content is protected !!