Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಮತ್ತೊಂದು ಆರೋಪ ಮಾಡಿದ ಶಾಸಕ ಯತ್ನಾಳ್‌

ವಿಜಯಪುರ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮದರಸಾ ಹಾಗೂ ಉರ್ದು ಶಾಲೆಗಳಿಗೆ ಹಣ ನೀಡುತ್ತಿದೆ. ಆದರೆ ಮದರಸಾಗಳಲ್ಲ ಏನು ಕಲಿಸುತ್ತಾರೆ? ಅವರು ಕಲಿಸುವುದೆಲ್ಲಾ ದೇಶ ವಿರೋಧಿ ಮತ್ತು ಲವ್‌ ಜಿಹಾದ್‌ ಮಾಡೇಕೆಂಬ ವಿಚಾರಗಳೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಇಂದು(ಮಾರ್ಚ್‌.16) ಬಿಡದಿಯಲ್ಲಿ ಪಾಕಿಸ್ತಾನ ಪರ ಬರಹ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯದಲ್ಲಿ ಈ ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ಸಾಕಾಗಿದೆ. ಕರ್ನಾಟಕದಲ್ಲಿ ಹಿಂದೂ ಹೆಣ್ಣು ಮಕ್ಕಳ ಕೊಲೆಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರದ ಬಗ್ಗೆ ಕಿಂಚಿತ್ತೂ ಭಯವಿಲ್ಲ. ಹೀಗಾಗಿ ಪಾಕಿಸ್ತಾನದ ಬಗ್ಗೆ ಬರಹ ಬರಿಯುತ್ತಾರೆ ಎಂದರೆ ಅವರಿಗೆ ಎಷ್ಟು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಗೃಹಸಚಿವರಂತೂ ಏನು ಮಾಡದೇ ಬಿಗ್‌ ಝೀರೋ ಆಗಿದ್ದು, ಆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಖಾತೆಯನ್ನು ತೆಗೆದುಕೊಳ್ಳುತ್ತಿಲ್ಲ. ಅವರಿಂದಲೇ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು. ಅಲ್ಲದೇ ಸರ್ಕಾರವೂ ಕೂಡ ಮದರಸಾ ಮತ್ತು ಉರ್ದು ಶಾಲೆಗಳಿಗೆ ಹಣ ನೀಡುತ್ತಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಜೈ, ಇಸ್ಲಾಂ ಅಂದರೆ ಇಡೀ ಅನ್ಯ ಧರ್ಮದವರನ್ನು ನಾಶ ಮಾಡಬೇಕು ಹಾಗೂ ಲವ್‌ ಜಿಹಾದ್‌ ಅನ್ನು ಕಲಿಸುತ್ತಾರೆ ಎಂದು ವಾಗ್ದಾಳಿಇ ನಡೆಸಿದರು.

ಇದೇ ಸಂದರ್ಭದಲ್ಲಿ ಮುಸಲ್ಮಾನ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಮುಸಲ್ಮಾನರಿಗೆ ಆತ್ಮರಕ್ಷಣೆ ಕಲಿಸಿದರೆ, ನಿತ್ಯ ನಮ್ಮ ಧರ್ಮದ ಹೆಣ್ಣು ಮಕ್ಕಳೊಂದಿಗೆ ಹೊಡೆದಾಡಬೇಕಾ? ಏನು ಮುಸಲ್ಮಾನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆಯಾ ಎಂದು ಪ್ರಶ್ನಿಸಿದರು.

Tags: