Mysore
25
overcast clouds

Social Media

ಶನಿವಾರ, 30 ಮೇ 2026
Light
Dark

ಈ ಬಾರಿ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಸಿಗುವುದೇ?  

ಮಂಜು ಕೋಟೆ

ಕೋಟೆ: ಮೈಸೂರು ಪ್ರಾಂತ್ಯದ ನಾಯಕ ಸಮುದಾಯದ ಏಕೈಕ ಶಾಸಕರಾಗಿರುವುದು ಪ್ಲಸ್ ಪಾಯಿಂಟ್

ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ ಸಮುದಾಯದ ಏಕೈಕ ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಅನಿಲ್ ಚಿಕ್ಕಮಾದು ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಿ ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿಗೆ ಪಕ್ಷದ ವರಿಷ್ಠರು ಮುಂದಾಗಬೇಕೆಂಬ ಕೂಗು ತಾಲ್ಲೂಕಿನಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.

ತಾಲ್ಲೂಕಿನ ಇತಿಹಾಸದಲ್ಲಿ ಸತತ ಎರಡನೇ ಬಾರಿಗೆ ಶಾಸಕರಾಗಿರುವ ಏಕೈಕ ಶಾಸಕರಾದ ಅನಿಲ್ ಚಿಕ್ಕಮಾದರವರು ೮ ವರ್ಷಗಳಿಂದ ತಾಲ್ಲೂಕಿನ ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆಗೆ ದುಡಿಯುತ್ತಿದ್ದಾರೆ.

ಮೂರು ವರ್ಷಗಳ ಹಿಂದೆಯೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಾಯಕ ಸಮುದಾಯದ ಕೋಟಾದಿಂದ ಸಚಿವ ಸ್ಥಾನ ದೊರಕಬೇಕಾಗಿತ್ತು. ಆದರೆ ಪಕ್ಷದ ವರಿಷ್ಠರು ನಿಗಮ ಮಂಡಳಿ ಸ್ಥಾನ ನೀಡಿ ಮುಂದೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಿದ್ದರು ಎನ್ನಲಾಗಿದೆ.

ಈ ಬಾರಿ ಸಂಪುಟದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರಾದ ರಾಹುಲ್ ಗಾಂಧಿಯವರು ತೀರ್ಮಾನಿಸಿರುವುದರಿಂದ ಈ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡರು, ಸಾರ್ವಜನಿಕರು ಈ ಬಾರಿ ಹಲವು ವರ್ಷಗಳ ನಂತರ ಅನಿಲ್ ಚಿಕ್ಕಮಾದು ಅವರಿಗೆ ಈ ಮೂಲಕ ತಾಲ್ಲೂಕಿಗೆ ಸಚಿವ ಸ್ಥಾನ ದೊರಕಲಿದೆ ಎಂಬ ಆಶಾಭಾವನೆ ಹೊಂದಿದ್ದಾರೆ.

ಕ್ಷೇತ್ರದಲ್ಲಿ ಅತಿ ಹೆಚ್ಚು ಆದಿವಾಸಿ, ರೈತರು, ದಲಿತರು, ಗಿರಿಜನರು, ಬಡವರು ವಾಸಿಸುತ್ತಿದ್ದು, ನಾಲ್ಕು ಜಲಾಶಯಗಳು, ಎರಡು ಅಭಯಾರಣ್ಯ ಹೊಂದಿರುವ ಈ ಕ್ಷೇತ್ರಕ್ಕೆ ಈ ಬಾರಿ ಸಚಿವ ಸ್ಥಾನ ಸಿಗದಿದ್ದರೆ ಅಭಿವೃದ್ಧಿಯತ್ತ ಸಾಗುವುದು ಕಷ್ಟಕರವಾಗಲಿದೆ. ಆದ್ದರಿಂದ ಈ ಬಾರಿ ತಾಲ್ಲೂಕಿನ ಹಿತದೃಷ್ಟಿಯಿಂದ ಶಾಸಕ ರಾದ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಅಭಿಪ್ರಾಯವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜು, ಉದ್ಯಮಿ ಸಂದೇಶ್, ಮೈಮುಲ್ ಅಧ್ಯಕ್ಷ ಕೆ.ಈರೇಗೌಡ, ಜಯಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಸತೀಶ್ಗೌಡ, ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಏಜಾಜ್ ಪಾಷಾ, ಮಾದಪ್ಪ, ಮಾದರ ಮಹಾಸಭಾ ತಾ.ಅಧ್ಯಕ್ಷ ಪರಶಿವಮೂರ್ತಿ, ಜಿಪಂ ಮಾಜಿ ಸದಸ್ಯರಾದ ನರಸೀಪುರ ರವಿ, ನಂದಿನಿ ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯ ಮಂಜುನಾಥ್, ಹಿರೇಹಳ್ಳಿ ಸೋಮೇಶ್, ಗಣೇಶಾಚಾರ್, ರಾಜು ವಿಶ್ವಕರ್ಮ, ಹೋಂಡಾ ನಯಾಜ್, ಹೀರೋ ಜೈರಾಮ್,ಮರಿದೇವಯ್ಯ, ನರಸಿಂಹಮೂರ್ತಿ, ಶಿವರಾಜು, ಅನ್ಸರ್, ಕೆಂಡಗಣ್ಣೇಗೌಡ, ಬಾಲಯ್ಯ, ಮಂಜುನಾಥ್, ಸೋಮೇ ಗೌಡ, ಡಿ.ಸಿ.ಸ್ವಾಮಿ, ನಾಗನಹಳ್ಳಿ ಪ್ರದೀಪ, ಶಿವಮಲ್ಲಪ್ಪ, ವೀರೇಂದ್ರ ಕುಮಾರ್, ಭಾಸ್ಕರ್, ವಡ್ಡರಗುಡಿ ರವಿ, ಆಸಿಫ್, ನಾಗರಾಜು, ಜಿನ್ನಳ್ಳಿ ರಾಜ ನಾಯಕ, ಸರಗೂರು ಶ್ರೀನಿವಾಸ್, ಶಿವಪ್ಪ ಕೋಟೆ, ಭಾಗ್ಯಲಕ್ಷ್ಮಿ ನಿಂಗರಾಜು, ಭಾನು ಮತಿ, ರುದ್ರಗೌಡ, ಪೇಂಟ್ ನಾಗೇಗೌಡ, ಮಧು, ಮಹದೇವಸ್ವಾಮಿ, ಅಶೋಕ್, ವಕೀಲ ಲೋಕೇಶ್, ವನಸಿರಿ ಉಮೇಶ್, ಪುಟ್ಟಬಸವ, ಜಯಶೀಲ, ಕಬಿನಿ ಹೇಮಂತ, ಸಿದ್ದರಾಮ ಮುಂತಾದ ಮುಖಂಡರು ಒತ್ತಾಯಿಸುತ್ತಿದ್ದಾರೆ.

೨೫ ವರ್ಷಗಳ ನಂತರ ಸಚಿವ ಸ್ಥಾನದ ಅವಕಾಶ ಪಕ್ಷದ ವರಿಷ್ಠರು ನಾಯಕ ಸಮುದಾಯದ ಕೋಟಾ ಹಾಗೂ ಪಕ್ಷದ ಹಾಗೂ ತಾಲ್ಲೂಕಿನ ಹಿತದೃಷ್ಟಿಯಿಂದ ಈ ಬಾರಿ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿದರೆ, ೨೫ ವರ್ಷಗಳ ನಂತರ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಂತಾಗಲಿದೆ. ಪಕ್ಷದ ವರಿಷ್ಠರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಇನ್ನಿತರರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

” ಕ್ಷೇತ್ರದಲ್ಲಿ ಎರಡನೇ ಬಾರಿಗೆ ಜನರು ಅತ್ಯಧಿಕ ಮತಗಳ ಮೂಲಕ ನನ್ನನ್ನು ಗೆಲ್ಲಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆಗೆ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗಾಗಿ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ.”

ಅನಿಲ್ ಚಿಕ್ಕಮಾದು, ಶಾಸಕರು

 

 

Tags:
error: Content is protected !!