Mysore
23
light rain

Social Media

ಭಾನುವಾರ, 24 ಮೇ 2026
Light
Dark

ಮೆಟ್ರೋ ದರ ಹೆಚ್ಚಳ ವಿಚಾರ: ಚೇರ್ಮನ್‌ ಜೊತೆ ಮಾತುಕತೆ ನಡೆಸುತ್ತೇನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌

ಮಂಗಳೂರು: ಮೆಟ್ರೋ ದರ ಶೇಕಡಾ.5ರಷ್ಟು ಹೆಚ್ಚಳ ಸಂಬಂಧ ಇಂದು ಅಥವಾ ನಾಳೆ ಮೆಟ್ರೋ ಚೇರ್ಮನ್‌ ಜೊತೆ ಮಾತನಾಡುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ದರ ಹೆಚ್ಚಳ ವಿಚಾರವಾಗಿ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಮೆಟ್ರೋ ಚೇರ್ಮನ್‌ ಆಗಿ ಕೇಂದ್ರ ಸರ್ಕಾರದವರು ಇದ್ದಾರೆ. ಇಂದು ಅಥವಾ ನಾಳೆ ಮೆಟ್ರೋ ಚೇರ್ಮನ್‌ ಜೊತೆ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಮಾಡಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ವಿಚಾರವಾಗಿ ಮಾತನಾಡುತ್ತೇನೆ ಎಂದು ಹೇಳಿದರು.

Tags:
error: Content is protected !!