Mysore
26
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಸಿಎಂ ಆಗೋಕೆ ನನಗೆ ಆತುರವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

dk shivkumar (2)

ಬೆಂಗಳೂರು: ಮುಖ್ಯಮಂತ್ರಿ ಆಗಲು ನನಗೆ ಯಾವುದೇ ಆತುರವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಬೆಂಗಳೂರು ನಡಿಗೆ ಹೆಸರಿನಲ್ಲಿ ನಡೆಸಿದ ಸಾರ್ವಜನಿಕ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ನನಗೆ ಮುಖ್ಯಮಂತ್ರಿ ಆಗೋಕೆ ಆತುರ ಇಲ್ಲ. ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಸಿಎಂ ಆಗೋ ಟೈಂ ಹತ್ತಿರ ಬಂದಿದೆ ಎಂದು ಎಲ್ಲೂ ಕೂಡ ಹೇಳಿಲ್ಲ. ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಜನರಿಗಾಗಿ ಒಳ್ಳೆಯ ಕೆಲಸ ಮಾಡುವುದೇ ನನ್ನ ಗುರಿ, ಜನರ ಸೇವೆ ಮಾಡಲು ಹಗಲು ರಾತ್ರಿ ಎನ್ನದೇ ತಿರುಗುತ್ತಿದ್ದೇನೆ ಎಂದರು.

ಇದನ್ನು ಓದಿ: ಡಿಕೆಶಿ ನವೆಂಬರ್‌ನಲ್ಲಿ ಸಿಎಂ ಆಗೇ ಆಗ್ತಾರೆ : ಎಲ್‌ ಆರ್‌ ಶಿವರಾಮೇಗೌಡ

ಇನ್ನು ಮುಂದುವರಿದು ಮಾತನಾಡಿದ ಅವರು, ನನ್ನ ಬಳಿ ಬರುವ ಜನರೆಲ್ಲಾ ನೀವು ಸಿಎಂ ಆಗಬೇಕು ಅಂತಾರೆ. ಆದರೆ ನಾನು ಸಿಎಂ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಮೂಲಕ ಕಾಂಗ್ರೆಸ್‌ನ ಹಲವಾರು ಶಾಸಕರು ಹಾಗೂ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಪದೇ ಪದೇ ಬಹಿರಂಗ ಹೇಳಿಕೆ ಕೊಡುತ್ತಿರುವ ವಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

Tags:
error: Content is protected !!