Mysore
22
overcast clouds

Social Media

ಭಾನುವಾರ, 13 ಜುಲೈ 2025
Light
Dark

ಏಪ್ರಿಲ್‌ 30ರವರೆಗೆ ಕರಾವಳಿಯಲ್ಲಿ‌ ಬಿಸಿಗಾಳಿ‌ ಅಲೆ‌ ತೀವ್ರ: ಹವಮಾನ ಇಲಾಖೆ ಎಚ್ಚರಿಕೆ

ಮಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ‌ದಿನದಿಂದ ದಿನಕ್ಕೇ‌ ಹೆಚ್ಚುತ್ತಿದೆ. ಹಿನ್ನಲೆ ಕರಾವಳಿ ಭಾಗದಲ್ಲಿ ಬಿಸಿಲಿನ ತಾಪ ಏ.30 ರವರೆಗೆ ತೀವ್ರವಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರವು ಹೇಳಿದೆ.

ದಕ್ಷಿಣ ಕನ್ನಡ, ಉಡುಪಿ ಸಹಿತ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಬಿಸಿಗಾಳಿಯ ಅಲೆ ಹೆಚ್ಚಲಿದೆ ಎಂದು ಭಾರತೀಯ ಹವಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನಲೆ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರವು ಬಿಸಿಲಿನ ಗಾಳಿಯಿಂದ ಆಗುವ ಅಪಾಯಗಳ ಬಗ್ಗೆ ‌ಎಚ್ಚರಿಕೆ ನೀಡಿದೆ.

ಬಿಸಿಗಾಳಿಯಿಂದ ಸನ್ ಸ್ಟ್ರೋಕ್ ಹಾಗೂ ಇನ್ನಿತರ ಖಾಯಿಲೆ ಹರಡುವ ಸಾದ್ಯತೆ ಇದೆ. ಮಧ್ಯಾಹ್ನ 1ರಿಂದ‌ 3ರತನಕ ಹೊರಗೆ ಹೋಗಬಾರದು. ಹಗುರವಾದ, ತೆಳುವಾದ ಬಟ್ಟೆಗಳನ್ನು ಧರಿಸಬೇಕು, ಹೆಚ್ಚು ನೀರು ಕುಡಿಯಬೇಕು ಎಂದು ಸಲಹೆ ನೀಡಿದೆ.

ಶುಕ್ರವಾರ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ‌ ದಾಖಲಾಗಿದೆ. ಜಿಲ್ಲೆಯ ಬಹುತೇಕ ಕಡೆ ಸಂಜೆಯಿಂದ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ  ಮಾಹಿತಿ ನೀಡಿದೆ.

Tags:
error: Content is protected !!