ಬೆಂಗಳೂರು: ಹ್ಯೂಮನ್ ಮೆಟಾನ್ಯುಮೊ ವೈರಸ್ (ಎಚ್‌ಎಂಪಿವಿ) ಬೆಂಗಳೂರಿನಲ್ಲೂ ಕಾಣಿಸಿಕೊಂಡಿದ್ದು, 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ.
ಮಗುವಿಗೆ ಶೀತ, ಜ್ವರ ಇದ್ದ ಕಾರಣ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗುವಿನ ರಕ್ತ ಪರೀಕ್ಷೆ ಮಾಡಿಸಿದಾಗ ವೈರಸ್ ಕಂಡು ಬಂದಿರುವುದು ಗೊತ್ತಾಗಿದೆ.
ಚಳಿಗಾಲ ಬಂದಾಗ ಶೀತ, ಜ್ವರ ಉಂಟಾಗುವುದು ಸಾಮಾನ್ಯ. ಅದು ವೈರಾಣು ಆಗಿ ಬದಲಾಗುತ್ತದೆ. ಇದಕ್ಕೆ ಎಚ್‌ಎಂಪಿವಿ ಎಂದು ಹೆಸರಿಡಲಾಗಿದೆ. ಇದು ಅಪಾಯಕಾರಿ ವೈರಸ್ ಅಲ್ಲ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಧನಂಜಯ ತಿಳಿಸಿದ್ದಾರೆ.
ಶೀತ, ಜ್ವರ ಇದ್ದವರಿಗೆ ಈ ವೈರಸ್ ಬಂದು ಹೋಗಿರಬಹುದು. ಅವರು ಪರೀಕ್ಷೆ ಮಾಡಿಸದೆ ಇರೋದ್ರಿಂದ ಗೊತ್ತಾಗಿಲ್ಲ. ಇದು ಸಾಮಾನ್ಯ ವೈರಸ್ ಅಷ್ಟೆ ಎಂದು ಹೇಳಿದ್ದಾರೆ.
ಆದರೂ, ಆರೋಗ್ಯ ಇಲಾಖೆಯೂ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಬೇಕೆ ಎಂದು ಹೇಳಿದ್ದಾರೆ.