Mysore
22
overcast clouds

Social Media

ಭಾನುವಾರ, 13 ಜುಲೈ 2025
Light
Dark

ಬೆಳ್ಳುಳ್ಳಿ ಬೆಲೆ ಏರಿಕೆ : ಕೆಜಿಗೆ ೬೦೦ ರೂ !

ಬೆಂಗಳೂರು :  ಬೆಳ್ಳುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 600 ರೂಪಾಯಿಗೆ ತಲುಪಿದೆ. ಸಾಮಾನ್ಯವಾಗಿ ಕೆಜಿಗೆ 150 ರಿಂದ 200 ರೂಪಾಯಿಗೆ ಮಾರಾಟವಾಗುವ ಬೆಳ್ಳುಳ್ಳಿ ಈಗ ಸಾಮಾನ್ಯ ಜನರ ಕೈಗೆ ಎಟುಕದಷ್ಟು ದುಬಾರಿಯಾಗಿದೆ.

ದೇಶದ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಕೆಜಿಗೆ 400 ರಿಂದ 600 ರೂಪಾಯಿಗೆ ಮಾರಾಟವಾಗುತ್ತಿದೆ. 15 ದಿನಗಳ ಹಿಂದೆ ಬೆಳ್ಳುಳ್ಳಿ ಬೆಲೆ ಕೆಜಿಗೆ 200 ರೂಪಾಯಿ ಇತ್ತು.

ಹೊಸ ಬೆಳೆ ಬರಲು ವಿಳಂಬ ಹಾಗೂ ಇಳುವರಿ ಕುಂಠಿತವಾಗಿರುವ ಕಾರಣ ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ. ಬದಲಾಗುತ್ತಿರುವ ಹವಾಮಾನವು ಬೆಳ್ಳುಳ್ಳಿ ಬೆಳೆಗಳಿಗೆ ಹಾನಿಯನ್ನುಂಟು ಮಾಡಿದೆ. ಏಕಾಏಕಿ ಸುರಿದ ಭಾರೀ ಮಳೆಯಿಂದ ಬೆಳೆ ಸಾಕಷ್ಟು ನಷ್ಟವಾಗಿವೆ. ಬೆಳೆ ಹಾನಿಯಿಂದಾಗಿ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿ ಪೂರೈಕೆಯಾಗುತ್ತಿಲ್ಲ.

ದಾಸ್ತಾನು ಕೊರತೆ ಬೆಲೆ ಏರಿಕೆಗೆ ಪ್ರಮುಖ ಕಾರಣ. ಜನರು ಬೆಲೆ ಏರಿಕೆಗೆ ಪ್ರಾಫಿಟ್ ಬುಕ್ಕಿಂಗ್ ಕಾರಣ ಎಂದೂ ಹೇಳ್ತಿದ್ದಾರೆ. ಬೆಳೆ ವಿಫಲವಾದ ಕಾರಣ ಎರಡನೇ ಬೆಳೆ ನಾಟಿ ಮಾಡಲು ಸಮಯ ಹಿಡಿಯಿತು. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗ್ತಿದೆ.

ಸಗಟು ವ್ಯಾಪಾರಿಗಳ ಪ್ರಕಾರ ಹೊಸ ಬೆಳೆ ಬಂದ ಮೇಲೆ ಬೆಲೆ ಕಡಿಮೆಯಾಗಲಿದೆ. ಹೊಸ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಳ್ಳುಳ್ಳಿ ಬೆಲೆಯಲ್ಲಿ ಇಳಿಕೆಯಾಗಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಬೆಳ್ಳುಳ್ಳಿ ಅಗ್ಗವಾಗುವ ಸಾಧ್ಯತೆ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!