Mysore
30
broken clouds

Social Media

ಶುಕ್ರವಾರ, 15 ಮೇ 2026
Light
Dark

ಜೂನ್‌ 21ರಂದು ನೀಟ್-ಯುಜಿ 2026ರ ಮರು ಪರೀಕ್ಷೆ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ‘ನೀಟ್-ಯುಜಿ 2026’ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ ಜೂನ್ 21ರಂದು ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿವೆ.

ಈ ಸಂಬಂಧ ಎನ್‌ಟಿಎ ಪ್ರಕಟಣೆ ಹೊರಡಿಸಿದ್ದು, ಮರು ಪರೀಕ್ಷೆಯನ್ನು 2026ರ ಜೂನ್‌ 21, ಭಾನುವಾರದಂದು ನಿಗದಿಪಡಿಸಲಾಗಿದೆ. ಅಧಿಕೃತ ಚಾನಲ್‌ಗಳ ಮೂಲಕವೇ ಅಭ್ಯರ್ಥಿಗಳು ಹಾಗೂ ಪೋಷಕರು ಮಾಹಿತಿ ಪಡೆದುಕೊಳ್ಳಬೇಕು ಎಂದು ವಿನಂತಿಸಿದೆ.

ಏನಿದು ಪ್ರಕರಣ?
ಮೇ 3ರಂದು ದೇಶಾದ್ಯಂತ ನಡೆದ ನೀಟ್-ಯುಜಿ 2026 ಪರೀಕ್ಷೆಗೂ ಮುನ್ನ ‘ಗೆಸ್ ಪೇಪರ್’ ಹೆಸರಿನಲ್ಲಿ ಕೆಲವು ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಬಳಿಕ ಪರೀಕ್ಷೆಯನ್ನು ಎನ್‌ಟಿಎ ರದ್ದುಗೊಳಿಸಿತ್ತು. ಜೀವಶಾಸ್ತ್ರದ 90 ಹಾಗೂ ರಸಾಯನಶಾಸ್ತ್ರದ 30 ಪ್ರಶ್ನೆಗಳು ಮೂಲ ಪ್ರಶ್ನೆಪತ್ರಿಕೆಯೊಂದಿಗೆ ಹೊಂದಿಕೆಯಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ರಾಜಸ್ಥಾನ ಎಸ್‌ಒಜಿ ಮತ್ತು ಸಿಬಿಐ ಈಗ ಪ್ರಕರಣದ ತನಿಖೆ ನಡೆಸುತ್ತಿವೆ. ಈ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗಳು ನಡೆದಿದ್ದವು.

ವಿದ್ಯಾರ್ಥಿಗಳ ಆಕ್ರೋಶ
‘2 ವರ್ಷ ತಯಾರಿ ನಡೆಸಿ ಪರೀಕ್ಷೆ ಬರೆದಿದ್ದೇವೆ. ಪ್ರಶ್ನೆಪತ್ರಿಕೆ ಸೋರಿಕೆಗೆ ನಾವೇನು ಮಾಡಿದೆವು? ಮತ್ತೆ ಪರೀಕ್ಷೆ ಬರೆಯುವುದು ಅನ್ಯಾಯ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋರಿಕೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೌನ್ಸೆಲಿಂಗ್ ವಿಳಂಬ
ಮರು ಪರೀಕ್ಷೆ ಜೂನ್‌ನಲ್ಲಿ ನಡೆದರೆ, ಫಲಿತಾಂಶ ಜುಲೈ ಮಧ್ಯಭಾಗದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಇದರಿಂದ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್ ಆಗಸ್ಟ್‌ನಲ್ಲಿ ಆರಂಭವಾಗಿ, ಶೈಕ್ಷಣಿಕ ವರ್ಷ ಸುಮಾರು 2 ತಿಂಗಳು ವಿಳಂಬವಾಗಲಿದೆ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ.

Tags:
error: Content is protected !!