ಬೆಂಗಳೂರು: ಸಚಿವ ಎಚ್.ಸಿ.ಮಹದೇವಪ್ಪ ಅವರು ತಮ್ಮ ಮನೆಗೆ ವೈಯಕ್ತಿಕ ಕೆಲಸಕ್ಕೆ ಬಂದಿದ್ದರು. ಅದರಲ್ಲಿ ವಿಶೇಷವೇನಿಲ್ಲ, ಸಚಿವರುಗಳು ಒಟ್ಟಿಗೆ ತಿಂಡಿಗೂ ಮತ್ತು ಊಟಕ್ಕೂ ಹೋಗಬಾರದಾ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಮತ್ತಷ್ಟು ಬೆಳವಣಿಗೆ ನಡೆಯುತ್ತಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ರಾಜ್ಯದಲ್ಲಿರುವಾಗಲೇ ಇಂದು ಗೃಹ ಸಚಿವ ಪರಮೇಶ್ವರ್ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಅವರ ಭೇಟಿ ಕುತೂಹಲಕರ ಮೂಡಿಸಿದೆ. ಆದರೆ ಎಚ್.ಸಿ.ಮಹದೇವಪ್ಪ ಅವರು ಗೃಹ ಸಚಿವರ ಮನೆಯಿಂದ ತೆರಳುವಾಗ ನಾವು ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಗರದ ಸದಾಶಿವನಗರದಲ್ಲಿ ಇಂದು(ಜನವರಿ.17) ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹದೇವಪ್ಪ ಅವರು ವೈಯಕ್ತಿಕ ಕೆಲಸಕ್ಕೆ ಬಂದಿದ್ದರು. ಅವರು ನಮ್ಮ ಮನೆಗೆ ಅನೇಕ ಬಾರಿ ತಮ್ಮ ಮನೆಗೆ ಭೇಟಿ ನೀಡುತ್ತಿರುತ್ತಾರೆ. ನಾವು ಅವರ ಮನೆಗೆ ಹೋಗುತ್ತೇವೆ, ಅವರು ಬರುತ್ತಾರೆ. ತಿಂಡಿಗೂ ಮತ್ತು ಊಟಕ್ಕೂ ಸಚಿವರು ಮನೆಗೆ ಹೋಗಬಾರದಾ? ಅದರಲ್ಲಿ ವಿಶೇಷ ಏನಿದೆ. ಅವರು ತಮ್ಮ ನಿವಾಸಕ್ಕೆ ಬಂದು ಯಾವುದೇ ಚರ್ಚೆ ನಡೆಸಿಲ್ಲ ಎಂದರು.
ಸಚಿವರು ಅಂದಮೇಲೆ ಒಬ್ಬರ ಮನೆಗೆ, ಮತ್ತೊಬ್ಬರು ತಿಂಡಿಗೋ ಅಥವಾ ಊಟಕ್ಕೋ ಹೋಗುವುದು ಸಹಜ. ಆದರೆ ಈ ವೇಳೆ ಚರ್ಚೆ ನಡೆಯುತ್ತವೆ ಎಂದರೆ ಅದು ಸುಳ್ಳು. ಬೇರೆ ಯಾವುದಕ್ಕೂ ಇದಕ್ಕೂ ಸಂಬಂಧ ಇಲ್ಲ. ನಮ್ಮ ವೈಯಕ್ತಿಕ ಭೇಟಿಗಳನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.