Mysore
23
few clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

5 ವರ್ಷ ನಾನೇ ಸಿಎಂ ಎಂದು ಹೇಳೋದಕ್ಕೂ ವ್ಯಾಕ್ಸಿನ್‌ ಕಾರಣ: ಮಾಜಿ ಸಿಎಂ ಡಿ.ವಿ.ಸದಾನಂದಗೌಡ

Even Saying ‘I’ll Be CM for 5 Years’ Needs a Vaccine: Former CM D.V. Sadananda Gowda

ಬೆಂಗಳೂರು: ಹೃದಯಾಘಾತಕ್ಕೆ ವ್ಯಾಕ್ಸಿನ್‌ ಕಾರಣ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಓಡಿ ಹೋಗಿ ಕ್ಯೂನಲ್ಲಿ ನಿಂತು ವ್ಯಾಕ್ಸಿನ್‌ ತೆಗೆದುಕೊಂಡವರು ಸಿಎಂ ಸಿದ್ದರಾಮಯ್ಯ ಅವರೇ. ಓಡಿಹೋಗಿ ಮೊದಲು ವ್ಯಾಕ್ಸಿನ್‌ ತೆಗೆದುಕೊಂಡವರು ಅವರೇ. 5 ವರ್ಷ ನಾನೇ ಸಿಎಂ ಎಂದು ಹೇಳೋದಕ್ಕೂ ವ್ಯಾಕ್ಸಿನ್‌ ಕಾರಣ ಎಂದು ಕಿಡಿಕಾರಿದರು.

ಇನ್ನು ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ ಬ್ಯಾನ್‌ ಎಂಬ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆರ್‌ಎಸ್‌ಎಸ್‌ ನಿಷೇಧ ಸಾಧ್ಯವೇ ಇಲ್ಲದ ಮಾತು. ಪ್ರಿಯಾಂಕ್‌ ಖರ್ಗೆ ವ್ಯಾಪ್ತಿ ಮೀರಿ ಹೋಗುತ್ತಿದ್ದಾರೆ. ಹುಚ್ಚರಿಗೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಮುಂದೆ ಅಧಿಕಾರಕ್ಕೆ ಬರುವ ಯೋಗ್ಯತೆ ಇಲ್ಲ. ಆರ್‌ಎಸ್‌ಎಸ್‌ನ್ನು ಕಾಂಗ್ರೆಸ್‌ ಮುಟ್ಟಿ ನೋಡಲಿ ಎಂದು ಕಿಡಿಕಾರಿದರು.

Tags:
error: Content is protected !!